ನೇತ್ರ ತಪಾಸಣೆ ಅಗತ್ಯ: ಡಾ.ಶೆಟ್ಟಿ

7

ನೇತ್ರ ತಪಾಸಣೆ ಅಗತ್ಯ: ಡಾ.ಶೆಟ್ಟಿ

Published:
Updated:
Deccan Herald

ಹೊಸಕೋಟೆ: ‘ಗ್ಲೂಕೋಮದಿಂದ ದೃಷ್ಟಿಹೀನತೆ ಬರದಂತೆ ಮುಂಜಾಗ್ರತೆ ವಹಿಸುವ ಉದ್ದೇಶದಿಂದ 40 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ನೇತ್ರ ತಜ್ಞ ಡಾ.ಸುಂದರರಾಮ ಶೆಟ್ಟಿ ಹೇಳಿದರು.

ಪಟ್ಟಣದ ಟೌನ್ ಕೋ ಆಪರೇಟಿವ್ ಬ್ಯಾಂಕ್ ಬುಧವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ‘ದೃಷ್ಟಿದೋಷ ತೊಂದರೆ ತಪ್ಪಿಸುವಲ್ಲಿ ಒಂದನೇ ತರಗತಿಗೆ ಸೇರಿಸುವ ಸಂದರ್ಭದಲ್ಲೇ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಿಸಬೇಕು’ ಎಂದರು. 

ಬ್ಯಾಂಕ್ ವ್ಯವಹಾರಗಳಿಗಷ್ಟೇ ಸೀಮಿತವಾಗಿರದೆ ಸದಸ್ಯರ ಹಿತ ಕಾಪಾಡುವಲ್ಲೂ ಹಲವು ಕಾರ್ಯಕ್ರಮ ಆಯೋಜಿಸುತ್ತಿದೆ. ಸದಸ್ಯರಿಗೆ ಏರ್ಪಡಿಸುತ್ತಿರುವ ತಪಾಸಣೆ ಶಿಬಿರದಲ್ಲಿ ಇದುವರೆಗೆ 450ಕ್ಕೂ ಹೆಚ್ಚು ಜನರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. 2 ಸಾವಿರ ಜನ ಕನ್ನಡಕದ ಸೌಲಭ್ಯ ಪಡೆದಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷೆ ಟಿ.ಅರುಣಾ ಹೇಳಿದರು.

ಶಾಸಕ ಎನ್.ನಾಗರಾಜು ಶಿಬಿರಕ್ಕೆ ಚಾಲನೆ ನೀಡಿದರು. ಪ್ರಧಾನ ವ್ಯವಸ್ಥಾಪಕ ಎಸ್.ಬಿ.ಪಾಟೀಲ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !