ಭಾರತದ ದೇಶೀಯ ಬ್ರ್ಯಾಂಡ್ ಆಗಿರುವ ಫ್ಯಾಬ್ಇಂಡಿಯಾ ತನ್ನ ಬೇಸಿಗೆ 2026ರ ವಿಶೇಷ ಸಂಗ್ರಹವಾಗಿರುವ ‘ಆ ಬೇಸಿಗೆಯ ಭಾವ’ (That Summer Feeling) ಅನ್ನು ಪರಿಚಯಿಸಿದೆ.

ಹೊಸ ಸಂಗ್ರಹವನ್ನು ಬೇಸಿಗೆಯಲ್ಲಿ ಭಾರತೀಯ ಸೌಂದರ್ಯ ಮತ್ತು ನೆನಪುಗಳನ್ನು ಆಚರಿಸುವ ಉದ್ದೇಶದಿಂದ ರೂಪಿಸಿದ್ದಾರೆ. ಹತ್ತಿ ಮತ್ತು ಲಿನೆನ್ನಂತಹ ನೈಸರ್ಗಿಕ ಬಟ್ಟೆಗಳಿಂದ ತಯಾರಿಸಲಾದ ಉಡುಪುಗಳು, ಕಲಾತ್ಮಕ ಆಭರಣಗಳು ಮತ್ತು ಮನೆ ಅಲಂಕಾರ ವಸ್ತುಗಳು ಇದರ ಪ್ರಮುಖ ಆಕರ್ಷಣೆಯಾಗಿದೆ. ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಮನೆ ಬಳಕೆಯ ವಿವಿಧ ಉತ್ಪನ್ನಗಳು ಒಂದೇ ಸೂರಿನ ಅಡಿಯಲ್ಲಿ ದೊರೆಯುವುದು ಇಲ್ಲಿನ ವಿಶೇಷ.

ಬೇಸಿಗೆಯಲ್ಲಿ ಭಾರತದ ಶಾಂತ ಮತ್ತು ಸಂತೋಷದ ಕ್ಷಣಗಳಿಂದ ಪ್ರೇರಿತವಾಗಿರುವ ಈ ಸಂಗ್ರಹದಲ್ಲಿ ಅಜ್ರಖ್, ಇಂಡಿಗೋ, ದಾಬು, ಇಕ್ಕತ್, ಕಲಂಕಾರಿ ಹಾಗೂ ಹ್ಯಾಂಡ್-ಬ್ಲಾಕ್ ಪ್ರಿಂಟಿಂಗ್ ಮುಂತಾದ ಸಾಂಪ್ರದಾಯಿಕ ಭಾರತೀಯ ಕಲಾ ತಂತ್ರಗಳನ್ನು ಆಧುನಿಕ ಶೈಲಿಯಲ್ಲಿ ಪರಿಚಯಿಸಲಾಗಿದೆ.

ಈ ಕುರಿತು ಮಾತನಾಡಿದ ಫ್ಯಾಬ್ಇಂಡಿಯಾದ ವಕ್ತಾರರು ‘ಭಾರತದಲ್ಲಿ ಬೇಸಿಗೆ ಕೇವಲ ಒಂದು ಋತುವಲ್ಲ, ಅದು ಒಂದು ವಿಶೇಷ ಅನುಭವ. ಮಧ್ಯಾಹ್ನದ ನಿಶ್ಶಬ್ಧ ಕ್ಷಣಗಳಿಂದ ಹಿಡಿದು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯುವ ತಂಪಾದ ಸಂಜೆಗಳವರೆಗೆ ಅನೇಕ ನೆನಪುಗಳಿಂದ ಕೂಡಿರುತ್ತದೆ. ಬೇಸಿಗೆಯ ಭಾವ ಸಂಗ್ರಹದ ಮೂಲಕ ಹಗುರವಾದ ಬಟ್ಟೆಗಳು, ಆರಾಮದಾಯಕ ವಿನ್ಯಾಸಗಳು ಮತ್ತು ಭಾರತೀಯ ಕರಕುಶಲತೆಯ ಸೌಂದರ್ಯವನ್ನು ಜನರಿಗೆ ತಲುಪಿಸಲು ನಾವು ಪ್ರಯತ್ನಿಸಿದ್ದೇವೆ’ ಎಂದು ಹೇಳಿದರು.

ಈ ಸಂಗ್ರಹದಲ್ಲಿ ಇಂಡಿಗೋ, ಬಿಳಿ, ಮಸ್ಟರ್ಡ್, ಸಾಫ್ಟ್ ಪಿಂಕ್ ಮತ್ತು ಮಣ್ಣಿನ ಬಣ್ಣದ ಕೆಂಪು ಛಾಯೆಗಳು ಪ್ರಮುಖವಾಗಿವೆ. ಹೂವಿನ ವಿನ್ಯಾಸಗಳು, ಜ್ಯಾಮಿತೀಯ ಮಾದರಿಗಳು ಹಾಗೂ ಪ್ರಕೃತಿಯಿಂದ ಪ್ರೇರಿತವಾದ ಪ್ರಿಂಟ್ಗಳು ಉಡುಪುಗಳಿಗೆ ಹೊಸತನವನ್ನು ನೀಡುತ್ತವೆ. ಹಾಲ್ಟರ್ ನೆಕ್, ವಿ-ನೆಕ್, ಕ್ಯೂಬನ್ ಕಾಲರ್ ಮತ್ತು ಬ್ಯಾಂಡ್ ಕಾಲರ್ ವಿನ್ಯಾಸಗಳು ಬೇಸಿಗೆಯ ಆರಾಮದಾಯಕ ಫ್ಯಾಷನ್ಗೆ ಸೂಕ್ತವಾಗಿವೆ.

ಇದರ ಜೊತೆಗೆ, ದಿನವಿಡೀ ಆರಾಮ ಮತ್ತು ಆತ್ಮವಿಶ್ವಾಸ ನೀಡುವಂತೆ ವಿನ್ಯಾಸಗೊಳಿಸಲಾದ ವರ್ಕ್ವೇರ್ ಉಡುಪುಗಳೂ ಈ ಸಂಗ್ರಹದಲ್ಲಿ ಸೇರಿವೆ.

ಫ್ಯಾಬ್ಇಂಡಿಯಾದ ಗೃಹ ಮತ್ತು ಲೈಫ್ಸ್ಟೈಲ್ ಶ್ರೇಣಿ ಕೂಡ ಬೇಸಿಗೆಯ ಸ್ಪರ್ಶವನ್ನು ಮನೆಗೆ ನೀಡಲಿದೆ. ಹ್ಯಾಂಡ್-ಬ್ಲಾಕ್ ಪ್ರಿಂಟ್ ಕುಶನ್ಗಳು, ಹಗುರವಾದ ಬೆಡ್ಲಿನೆನ್ಗಳು ಹಾಗೂ ಕೈಕುಸುರಿಯ ಡಿನ್ನರ್ವೇರ್ಗಳು ಮನೆಯನ್ನು ತಾಜಾ ಮತ್ತು ಶಾಂತ ವಾತಾವರಣದ ಸ್ಥಳವನ್ನಾಗಿ ರೂಪಿಸುತ್ತವೆ.

ಕೈಯಿಂದ ತಯಾರಿಸಲಾದ ಉತ್ಪನ್ನಗಳು Craftmark ಟ್ಯಾಗ್ ಹೊಂದಿದ್ದು, ಭಾರತೀಯ ಕರಕುಶಲ ಪರಂಪರೆ ಮತ್ತು ಗುಣಮಟ್ಟದ ಮೇಲಿನ ಫ್ಯಾಬ್ಇಂಡಿಯಾದ ಬದ್ಧತೆಯನ್ನು ತೋರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.