ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ನಟರ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ

ನಟರ ಹೆಸರು, ಭಾವಚಿತ್ರ ಬಳಸಿ ಕೃತ್ಯ
Last Updated 18 ಆಗಸ್ಟ್ 2019, 19:21 IST
ಅಕ್ಷರ ಗಾತ್ರ

ಬೆಂಗಳೂರು: ನಟರೊಬ್ಬರ ಹೆಸರು ಮತ್ತು ಭಾವಚಿತ್ರ ಬಳಸಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು, ಸಿನಿಮಾಗಳಲ್ಲಿ ನಟಿಸಲು ಅವಕಾಶ ಮಾಡಿಕೊಡುವುದಾಗಿ ಮಹಿಳೆಯರನ್ನು ನಂಬಿಸಿ ಹಣ ಪಡೆಯುತ್ತಿದ್ದ ವಂಚಕ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾನೆ.

ಸುಂಕದಕಟ್ಟೆಯ ಹೊಯ್ಸಳನಗರದ ನಿವಾಸಿ ವೆಂಕಟೇಶ ಭಾವಸಾರ (22) ಬಂಧಿತ ಆರೋಪಿ. ನಕಲಿ ಫೇಸ್‌ಬುಕ್‌ ಖಾತೆ ಮೂಲಕ ಹೆಣ್ಣು ಮಕ್ಕಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ, ಸಲುಗೆಯಿಂದ ಚಾಟಿಂಗ್‌ ಮಾಡುತ್ತಿದ್ದ.

ತನ್ನ ಬಲೆಗೆ ಬಿದ್ದವರು ಮಾತು ಮುಂದುವರಿಸಲು ಬಯಸುತ್ತಿದ್ದಂತೆ ತನ್ನ ವರಸೆ ಬದಲಿಸುತ್ತಿದ್ದ ಆತ, ಡಿಸೆಂಬರ್‌ವರೆಗೆ ಮಾತನಾಡಲು ಸಮಯ ಇಲ್ಲವೆಂದು ಹೇಳುತ್ತಿದ್ದ. ಅಷ್ಟೇ ಅಲ್ಲ, ಸಿನಿಮಾದಲ್ಲಿ ಅವಕಾಶ ಸಿಗಲು ತನ್ನ ಸಹಾಯಕ ವೆಂಕಿರಾವ್‌ ಎಂಬುವನ ಜೊತೆ ಸಂಪರ್ಕದಲ್ಲಿರುವಂತೆ ವಾಟ್ಸ್‌ಆ್ಯಪ್‌ ನಂಬರ್‌ ನೀಡುತ್ತಿದ್ದ. ಬಳಿಕ ವೆಂಕಿರಾವ್‌ ಹೆಸರಿನಲ್ಲಿ ವಾಟ್ಸ್ಆ್ಯಪ್‌ ನಂಬರ್‌ನಲ್ಲಿ ಚಾಟಿಂಗ್‌ ಮುಂದುವರಿಸುತ್ತಿದ್ದ ವೆಂಕಟೇಶ, ಪರಿಚಿತರಾದ ಮಹಿಳೆಯರು ಮತ್ತು ಅವರ ಮಗಳನ್ನು ಭೇಟಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಈ ಬಗ್ಗೆ ದೂರು ನೀಡಿರುವ ಮಹಿಳೆಯ ಮಗಳಿಗೆ ಸಿನಿಮಾದಲ್ಲಿ ಅವಕಾಶ ಮಾಡಿಕೊಡುವ ಆಮಿಷ ಒಡ್ಡಿ ₹ 25 ಸಾವಿರ ಕಿತ್ತುಕೊಂಡಿದ್ದ. ಹಣ ನೀಡಿದ್ದ ಆ ಮಹಿಳೆ, ವಿಡಿಯೊ ಕಾಲ್‌ ಮಾಡಿದಾಗ ಆಕಸ್ಮಿಕವಾಗಿ ಕರೆ ರಿಸೀವ್‌ ಮಾಡಿದ್ದ ಆರೋಪಿ, ಬಳಿಕ ಕಾಲ್‌ ಮರ್ಜ್‌ ಆಗಿದೆ ಎಂದು ಹೇಳಿಕೊಂಡು ತಪ್ಪಿಸಿಕೊಂಡಿದ್ದ. ‘ಚಿತ್ರನಟರು ನಿಮ್ಮನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ಬಯಸುತ್ತಿದ್ದಾರೆ’ ಎಂದೂ ವರ್ಣಿಸಿ ನಂಬಿಸುತ್ತಿದ್ದ.

ಅಷ್ಟೇ ಅಲ್ಲ, ಟ್ರೂ ಕಾಲರ್‌ನಲ್ಲೂ ನಟನ ಹೆಸರು ಕಾಣುವಂತೆ ಎಡಿಟ್ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು. ತನ್ನ ಹೆಸರು ಮತ್ತು ಭಾವಚಿತ್ರ ಬಳಸಿ ನಕಲಿ ಖಾತೆ ತೆರೆದು, ತನ್ನಂತೆ ಬಿಂಬಿಸಿಕೊಂಡು ಅಮಾಯಕ ಹೆಣ್ಣು ಮಕ್ಕಳನ್ನು ವಂಚಿಸುತ್ತಿರುವ ಮಾಹಿತಿ ಗೊತ್ತಾದ ನಟ, ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT