ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ಪ್ರಕರಣ: ಅಮೆರಿಕ ರಾಯಭಾರಿಗೆ ಸಮನ್ಸ್

Last Updated 8 ಏಪ್ರಿಲ್ 2018, 20:34 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿ ಕೋಲ್ ಜೋಸೆಫ್ ಅವರು ದಮನ್-ಇ-ಕೊಹ್ ಬಳಿ ಅಪಘಾತ ನಡೆಸಿದ ‍ಪ್ರಕರಣರಲ್ಲಿ ರಾಯಭಾರಿ ಡೇವಿಡ್‌ ಹ್ಯಾಲೆ ಅವರಿಗೆ ಪಾಕಿಸ್ತಾನ ಸರ್ಕಾರ ಸಮನ್ಸ್‌ ಜಾರಿ ಮಾಡಿದೆ.

ಲ್ಯಾಂಡ್‌ ಕ್ರೂಸರ್‌ ಕಾರ್‌ ಅನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಕೋಲ್ ಜೋಸೆಫ್ ಅವರು ದಮನ್-ಇ-ಕೊಹ್ ಎಂಬಲ್ಲಿ  ಸಂಚಾರ ನಿಯಮ ಉಲ್ಲಂಘಿಸಿ ಬೈಕ್‌ಗೆ ಗುದ್ದಿದ್ದರು.

ಬೈಕ್‌ ಚಲಾಯಿಸುತ್ತಿದ್ದ ಅತಿಕ್‌ ಬೈಗ್‌(22) ಅವರು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟರು. ಹಿಂಬದಿ ಸವಾರ ರಹೀಲ್ ಅಹ್ಮದ್‌ ಗಾಯಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ರಾಜತಾಂತ್ರಿಕರು ಮಾಡಿರುವ ಮೂರನೇ ಅಪಘಾತವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT