ವೃದ್ಧೆಯಿಂದ ₹ 3.55 ಲಕ್ಷ ಕಿತ್ತ ಫೇಸ್‌ಬುಕ್ ಸ್ನೇಹಿತ
ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ವಿದೇಶಿ ಪ್ರಜೆಯೊಬ್ಬ, ನಗರದ ವೃದ್ಧೆಯೊಬ್ಬರ ಸ್ನೇಹ ಬೆಳೆಸಿ ₹ 3.55 ಲಕ್ಷ ಪಡೆದುಕೊಂಡು ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ನಗರದ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಇನ್ಫೆಂಟ್ರಿ ರಸ್ತೆಯ 60 ವರ್ಷದ ವೃದ್ಧೆ ದೂರು ನೀಡಿದ್ದಾರೆ. ಮಿಲ್ಲರ್ ವಿಲ್ಲಿಂಗ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೆಲ ತಿಂಗಳ ಹಿಂದಷ್ಟೇ ವೃದ್ಧೆಗೆ ಫೇಸ್‌ಬುಕ್‌ನಲ್ಲಿ ಮಿಲ್ಲರ್ ಪರಿಚಯವಾಗಿತ್ತು. ಇಬ್ಬರೂ ಚಾಟಿಂಗ್ ಮಾಡುತ್ತ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡಿದ್ದರು. ವಾಟ್ಸ್ ಆ್ಯಪ್‌ನಲ್ಲೂ ಚಾಟಿಂಗ್ ಮುಂದುವರಿಸಿದ್ದರು.’
‘ತುರ್ತಾಗಿ ಹಣ ಬೇಕೆಂದು ಹೇಳಿದ್ದ ಆರೋಪಿ ಮಿಲ್ಲರ್, ಕೆಲ ದಿನಗಳಲ್ಲಿ ದುಪ್ಪಟ್ಟು ಹಣದೊಂದಿಗೆ ವಾಪಸು ಕೊಡುವುದಾಗಿ ಹೇಳಿದ್ದ. ಅದನ್ನು ನಂಬಿದ್ದ ವೃದ್ಧೆ, ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹ 3.55 ಲಕ್ಷ ಹಾಕಿದ್ದರು. ಅದಾದ ನಂತರ ಆರೋಪಿ ನಾಪತ್ತೆಯಾಗಿದ್ದಾನೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.