ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಅಂಕಪಟ್ಟಿ ಮಾರಾಟ: ಒಬ್ಬನ ಬಂಧನ

Last Updated 22 ಜನವರಿ 2020, 21:46 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ದೇವನಹಳ್ಳಿಯ ಮಂಜುನಾಥ್ ಎಂಬಾತನನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಕಂಪ್ಯೂಟರ್, ಪ್ರಿಂಟರ್ ಹಾಗೂ ನಕಲಿ ಅಂಕಪಟ್ಟಿಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಖಾಸಗಿ ಕಾಲೇಜಿನಲ್ಲಿ ಸಹಾಯಕನಾಗಿ ಮಂಜುನಾಥ ಕೆಲಸ ಮಾಡಿಕೊಂಡಿದ್ದ. ಎಂಟಕ್ಕೂ ಹೆಚ್ಚು ಜನರಿಗೆ ವಂಚಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ವಿಶ್ವವಿದ್ಯಾಲಯಗಳ ಬಗ್ ಲೋಗೊ ಮತ್ತು ಮಾದರಿ ಅಂಕಪಟ್ಟಿಯನ್ನು ಆನ್‌ಲೈನ್‌ನಿಂದ ಸಂಗ್ರಹಿಸಿದ್ದ. ಫೋಟೊಶಾಪ್ ಸಾಫ್ಟ್‌ವೇರ್ ಮೂಲಕ ಅಂಕಪಟ್ಟಿ ಸಿದ್ಧಪಡಿಸುತ್ತಿದ್ದ. ತಾನು ಕೆಲಸ ಮಾಡಿಕೊಂಡಿದ್ದ ಕಾಲೇಜಿನ ವಿದ್ಯಾರ್ಥಿಗಳನ್ನು ಪರಿಚಯಿಸಿಕೊಂಡು ಯುವಕರನ್ನು ಸೆಳೆಯುತ್ತಿದ್ದ. ಮಾನ್ಯತೆ ಇರುವ ವಿ.ವಿ.ಗಳ ಅಂಕಪಟ್ಟಿ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ ಎಂದು ತಿಳಿಸಿದರು.

ಕೋಲಾರದ ಮಹೇಶ್ ಎಂಬಾತ ಇತ್ತೀಚೆಗೆ ಉದ್ಯೋಗ ಅರಸಿ ಕಂಪನಿಗೆ ಹೋಗಿದ್ದ. ಈ ವೇಳೆ ಪದವಿ ಪೂರ್ಣಗೊಳಿಸಿರುವ ಅಂಕಪಟ್ಟಿ ನೀಡುವಂತೆ ಕಂಪನಿಯವರು ಕೇಳಿದ್ದರು. ಬಳಿಕ ಕೆಲಸದ ವಿಚಾರವನ್ನು ತನ್ನ ಸ್ನೇಹಿತನ ಮುಂದೆ ಹೇಳಿಕೊಂಡಿದ್ದ. ಆತ ತನಗೆ ಪರಿಚಯವಿದ್ದ ಮಂಜುನಾಥ್‌ನನ್ನು ಭೇಟಿಯಾಗುವಂತೆ ಸೂಚಿಸಿದ್ದ. ಭೋವಿಪಾಳ್ಯ ಪಾರ್ಕ್ ಬಳಿ ಮಂಜುನಾಥ್‌ನನ್ನು ಮಹೇಶ್‌ ಭೇಟಿ ಮಾಡಿದ್ದ. ಈ ವೇಳೆ ಮಹೇಶ್ ತಾನು ಬಿ.ಎಸ್‌ಸಿ ಪದವಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದ್ದ ವಿಚಾರವನ್ನು ತಿಳಿಸಿದ್ದ. ಆಗ ಮಂಜುನಾಥ್, ‘ನನಗೆ ಕರ್ನಾಟಕ ವಿಶ್ವವಿದ್ಯಾಲಯದ ಅಧಿಕಾರಿಗಳ ಪರಿಚಯವಿದೆ. ₹ 2 ಲಕ್ಷ ಕೊಟ್ಟರೆ ಬೇಕಾದ ಅಂಕಪಟ್ಟಿ ಕೊಡಿ
ಸುತ್ತೇನೆ’ ಎಂದು ಆಮಿಷ ನೀಡಿದ್ದ.

ಆತನ ಮಾತನ್ನು ನಂಬಿದ ಮಹೇಶ್ ಮುಂಗಡವಾಗಿ ₹ 60 ಸಾವಿರ ಕೊಟ್ಟಿದ್ದಾನೆ. ಬಳಿಕ ಬಿ.ಎಸ್‌ಸಿ ಪದವಿ ವ್ಯಾಸಂಗದ ಒಂದನೇ ಸೆಮಿಸ್ಟರ್ ಅಂಕಪಟ್ಟಿ ನೀಡಿದ್ದ. ಬಾಕಿ 5 ಸೆಮಿಸ್ಟರ್‌ಗಳ ಅಂಕಪಟ್ಟಿಯನ್ನು ವಾರದೊಳಗೆ ಕೊಡುವುದಾಗಿ ಹೇಳಿದ್ದ. ಮಹೇಶ್ ಅಂಕಪಟ್ಟಿಯನ್ನು ತೆಗೆದುಕೊಂಡು ಕೆಲಸಕ್ಕಾಗಿ ಕಂಪನಿಗೆ ಹೋಗಿದ್ದ. ಪರಿಶೀಲನೆ ವೇಳೆ ನಕಲಿ ಎಂಬುದು ಗೊತ್ತಾಗಿ ದೂರು ಕೊಟ್ಟಿ
ದ್ದಾನೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT