ಸೋಮವಾರ, ಅಕ್ಟೋಬರ್ 26, 2020
25 °C

ನಕಲಿ ಕಸ್ಟಮರ್ ಕೇರ್: ಉದ್ಯೋಗಿಗೆ ₹90 ಸಾವಿರ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ನಕಲಿ ಕಸ್ಟಮರ್ ಕೇರ್ ಸಂಖ್ಯೆಯಿಂದ ಆನ್‍ಲೈನ್ ಮೂಲಕ ₹90 ಸಾವಿರ ವಂಚಿಸಿರುವ ಘಟನೆ ನಡೆದಿದೆ. ಶೇಷಾದ್ರಿಪುರ ನಿವಾಸಿ 29 ವರ್ಷದ ಉದ್ಯೋಗಿ, ರಾಷ್ಟ್ರೀಕೃತ  ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು.

ಕಳೆದ ಭಾನುವಾರ ಬ್ಯಾಂಕಿನ ಮೊಬೈಲ್ ಆ್ಯಪ್ ಬಳಕೆ ವೇಳೆ ಕೆಲ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಪರಿಹರಿಸಿಕೊಳ್ಳಲು ಇಂಟರ್‌ನೆಟ್‌ನಲ್ಲಿ ಬ್ಯಾಂಕ್‍ನ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿ, ಸಿಕ್ಕ ಸಂಖ್ಯೆಗೆ ಕರೆ ಮಾಡಿದಾಗ ವಂಚನೆಯಾಗಿದೆ. ಬಳಿಕ, ಅದು ನಕಲಿ ಸಂಖ್ಯೆ ಎಂದು ಅರಿವಾಗಿದೆ.

'ಕರೆ ಸ್ವೀಕರಿಸಿದ್ದ ಆನ್‍ಲೈನ್ ವಂಚಕ, ಸಮಸ್ಯೆ ಪರಿಹರಿಸುವ ನೆಪದಲ್ಲಿ ಖಾತೆಯ ವಿವರಗಳನ್ನು ಪಡೆದುಕೊಂಡರು. ಬಳಿಕ ಮೊಬೈಲ್‍ಗೆ ಬಂದ ಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ) ಸಂಖ್ಯೆಯನ್ನೂ ಕೇಳಿ ಪಡೆದರು. ಇದಾದ ಕೆಲವೇ ಸಮಯದಲ್ಲಿ ನನ್ನ ಖಾತೆಯಿಂದ ₹90 ಸಾವಿರ ಕಡಿತವಾಗಿದೆ' ಎಂದು ಉದ್ಯೋಗಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು