ಮಂಗಳವಾರ, ಸೆಪ್ಟೆಂಬರ್ 28, 2021
25 °C

ನಕಲಿ ಚಿನ್ನ ಅಡವಿಟ್ಟು ಸಾಲ; ನಿರ್ದೇಶಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ಚಿನ್ನ ಅಡವಿಟ್ಟು ₹ 42 ಲಕ್ಷ ಸಾಲ ಪಡೆದು ವಂಚಿಸಿದ ಆರೋಪದಡಿ ಸಿನಿಮಾ ನಿರ್ದೇಶಕ ರವಿರತ್ನಂ ಕರಮಲ ಸೇರಿ ಇಬ್ಬರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

‘ಫೆಡರಲ್ ಬ್ಯಾಂಕ್ ವ್ಯವಸ್ಥಾಪಕ ಭರತ್ ಅವರು ವಂಚನೆ ಬಗ್ಗೆ ದೂರು ನೀಡಿದ್ದರು. ರವಿರತ್ನಂ ಹಾಗೂ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

’ಆರೋಪಿ ರವಿರತ್ನಂ, ‘ಮಧುರ ಸ್ವಪ್ನ’ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಹಣದ ಅವಶ್ಯಕತೆ ಇದ್ದಾಗ ಶಿವಕುಮಾರ್ ಜೊತೆ ಸೇರಿ ಸಂಚು ರೂಪಿಸಿದ್ದರು. 1 ಕೆ.ಜಿ 50 ಗ್ರಾಂ ಚಿನ್ನವನ್ನು ಫೆಡರಲ್‌ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಆರೋಪಿಗಳು, ₹ 42 ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು ಕಂತು ಪಾವತಿಸುವಂತೆ ಬ್ಯಾಂಕ್ ಷರತ್ತು ವಿಧಿಸಿತ್ತು.’

‘ವರ್ಷದಿಂದ ಸಾಲಕ್ಕೆ ಯಾವುದೇ ಕಂತು ತುಂಬಿರಲಿಲ್ಲ. ಈ ಬಗ್ಗೆ ಆರೋಪಿಗಳಿಗೆ ಬ್ಯಾಂಕ್‌ ವ್ಯವಸ್ಥಾಪಕ ನೋಟಿಸ್‌ ನೀಡಿದ್ದರು. ಅದಕ್ಕೂ ಉತ್ತರಿಸಿರಲಿಲ್ಲ. ಹೀಗಾಗಿ, ಚಿನ್ನವನ್ನು ಹರಾಜು ಹಾಕಲು ವ್ಯವಸ್ಥಾಪಕರು ಮುಂದಾಗಿದ್ದರು. ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸಿದ್ದ ವ್ಯಕ್ತಿಯೊಬ್ಬರು ಚಿನ್ನ ಪರಿಶೀಲನೆಗೆ ಬಂದಿದ್ದರು. ಚಿನ್ನವನ್ನು ತುಂಡರಿಸಿ ಪರಿಶೀಲಿಸಿದಾಗ ನಕಲಿ ಎಂಬುದು ತಿಳಿದಿದೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸ್ ಮೂಲಗಳು
ತಿಳಿಸಿವೆ.

‘ಶೇ 40ರಷ್ಟು ಚಿನ್ನ ಲೇಪಿತ ಲೋಹವನ್ನು ಬ್ಯಾಂಕ್‌ಗೆ ನೀಡಿದ್ದ ಆರೋಪಿಗಳು, ಅದನ್ನೇ ಅಸಲಿ ಚಿನ್ನವೆಂದು ಹೇಳಿ ವಂಚಿಸಿದ್ದಾರೆ. ಚಿನ್ನ ಕತ್ತರಿಸಿದಾಗ ಲೋಹ ಪತ್ತೆಯಾಗಿದೆ’ ಎಂದೂ ಹೇಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು