ಬೆಂಗಳೂರು: ನಗರದಲ್ಲಿ ಮಳೆ–ಬಿರುಗಾಳಿಗೆ ಒಂದು ವಾರದಿಂದ ಧರೆಗುರುಳಿದ ನೂರಾರು ಮರ ಹಾಗೂ ಸಾವಿರಾರು ರೆಂಬೆ–ಕೊಂಬೆಗಳು, ತೆರವಾಗದೆ ರಸ್ತೆ ಹಾಗೂ ಪಾದಚಾರಿ ಮಾರ್ಗದಲ್ಲಿಯೇ ರಾಶಿ ಬಿದ್ದಿದ್ದು, ಪಾದಚಾರಿಗಳು, ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿವೆ.

ಆಲಿಕಲ್ಲು–ಬಿರುಗಾಳಿ ಸಹಿತ ಏಪ್ರಿಲ್ 29ರಂದು ಸುರಿದ ಮಳೆ ಹಾಗೂ ನಂತರದ ದಿನಗಳಲ್ಲಿ ಬಿದ್ದ ಮರ–ಕೊಂಬೆಗಳನ್ನು ಸಂಪೂರ್ಣವಾಗಿ ತೆರವು ಮಾಡಲಾಗಿದೆ ಎಂದು ಜಿಬಿಎ ಹಾಗೂ ನಗರ ಪಾಲಿಕೆಗಳು ಅಂಕಿ–ಅಂಶದ ಸಹಿತ ಮಾಹಿತಿ ನೀಡಿವೆ. ಆದರೆ, ವಾಸ್ತವದಲ್ಲಿ ಮರ–ಕೊಂಬೆಗಳು ರಸ್ತೆಯಿಂದ ತೆರವಾಗಿಲ್ಲ. ರಸ್ತೆಯ ಮಧ್ಯಕ್ಕೆ ಬಿದ್ದವನ್ನು ಪಕ್ಕಕ್ಕೆ ಸರಿಸಲಾಗಿದೆ.

ನಗರದ ಹಲವು ಪ್ರಮುಖ ರಸ್ತೆಗಳ ಮಧ್ಯಕ್ಕೆ ಬಿದ್ದಿದ್ದ ಮರಗಳನ್ನು ಕತ್ತರಿಸಿ, ರಸ್ತೆಯ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ರಾಶಿ ಹಾಕಲಾಗಿದೆ. ಒಂದು ವಾರವಾಗಿದ್ದರೂ ಅವುಗಳನ್ನು ತೆರವು ಮಾಡಿಲ್ಲ. ಹೀಗಾಗಿ, ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗಿದೆ.

ಜಿಬಿಎ ಹಾಗೂ ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಏಪ್ರಿಲ್ 290ರಿಂದ ಮರಗಳು– ಕೊಂಬೆಗಳು ಬಿದ್ದಿರುವ ಬಗ್ಗೆ ಮಾಹಿತಿಯನ್ನು ನಿತ್ಯವೂ ನೀಡಲಾಗುತ್ತಿದೆ. ಮೇ 5ರಂದು ನೀಡಿರುವ ಪ್ರಕಟಣೆಯಂತೆ, ನಗರದಾದ್ಯಂತ 516 ಮರಗಳು ಬಿದ್ದಿದ್ದು, ಅದರಲ್ಲಿ 507 ಮರಗಳನ್ನು ತೆರವು ಮಾಡಲಾಗಿದೆ. 1,305 ರೆಂಬೆ– ಕೊಂಬೆಗಳಲ್ಲಿ 1,256 ರೆಂಬೆ–ಕೊಂಬೆಗಳನ್ನು ತೆರವು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ನಗರದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿರುವ ಮರ–ಕೊಂಬೆಗಳ ರಾಶಿ ಬೇರೆಯದೇ ಚಿತ್ರಣ ನೀಡುತ್ತದೆ.

ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮರಗಳು ಧರೆಗುರುಳಿದ್ದು, ನಂತರದ ಸ್ಥಾನದಲ್ಲಿ ಕೇಂದ್ರ ನಗರ ಪಾಲಿಕೆ ವ್ಯಾಪ್ತಿ ಇದೆ. ಮೂರೂ ನಗರ ಪಾಲಿಕೆಗಳು ಬಹುತೇಕ ಎಲ್ಲ ಮರ–ಕೊಂಬೆಗಳನ್ನು ತೆರವು ಮಾಡಲಾಗಿದೆ ಎಂದು ಹೇಳಿವೆ. ಆದರೆ, ಮಲ್ಲೇಶ್ವರ, ಜಯನಗರ, ರಾಜಾಜಿನಗರ, ಪದ್ಮನಾಭನಗರ, ಕಬ್ಬನ್ ರಸ್ತೆ, ಶಿವಾಜಿನಗರ, ಶಾಂತಿನಗರ, ಸಿ.ವಿ. ರಾಮನ್ ನಗರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧರೆಗುರುಳಿದ್ದ ಮರ–ರೆಂಬೆ ಕೊಂಬೆಗಳು ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗದಲ್ಲಿಯೇ ಉಳಿದಿವೆ.

‘ಮರ ಬಿದ್ದು ಒಂದು ವಾರವಾಯಿತು. ಒಂದಷ್ಟು ಕಡಿದು ಪಕ್ಕಕ್ಕೆ ಸರಿಸಿದ್ದಾರೆ. ಪಾದಚಾರಿ ಮಾರ್ಗ ಹಾಗೂ ರಸ್ತೆಯ ಮೇಲೇ ಇನ್ನೂ ಬಿದ್ದಿದೆ. ಇದನ್ನು ತೆಗೆಯುತ್ತಿಲ್ಲ. ಪಾದಚಾರಿ ಮಾರ್ಗದಲ್ಲಿ ಓಡಾಡಲೂ ಆಗುತ್ತಿಲ್ಲ. ರಸ್ತೆಗೆ ಇಳಿದು, ವಾಹನಗಳಿಗೆ ಅಡ್ಡಿಯಾಗಿ ನಡೆಯುವಂತಾಗಿದೆ’ ಎಂದು ಜಯನಗರ 5ನೇ ಬ್ಲಾಕ್ನ ನಿವಾಸಿ ರಮೇಶ್ ಹೇಳಿದರು.

‘ಕಬ್ಬನ್ ರಸ್ತೆಯಲ್ಲಿ ಪಾದಚಾರಿ ಮಾರ್ಗವಲ್ಲದೆ ಅರ್ಧ ರಸ್ತೆಯಲ್ಲೂ ಬಿದ್ದಿರುವ ಮರ– ಅದರ ಕೊಂಬೆಗಳನ್ನು ಹಾಗೇ ಬಿಡಲಾಗಿದೆ. ಅವುಗಳನ್ನು ತೆರವು ಮಾಡದಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ಸಣ್ಣಪುಟ್ಟ ಅಪಘಾತಗಳೂ ಆಗುತ್ತಿವೆ’ ಎಂದು ಸವಾರ ಮುನಿರಾಜು ತಿಳಿಸಿದರು.

ಶೀಘ್ರ ತೆರವು: ಡಿಸಿಎಫ್ ‘

ನಗರದಲ್ಲಿ ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯವನ್ನು 30 ತಂಡಗಳು ನಿತ್ಯವೂ ಮಾಡುತ್ತಿವೆ. ಅತಿ ಹೆಚ್ಚು ಮರಗಳು– ಕೊಂಬೆಗಳು ಮೂರ್ನಾಲ್ಕು ದಿನದಲ್ಲಿ ಬಿದ್ದಿರುವುದರಿಂದ ಕೆಲವೆಡೆ ತೆರವು ಕಾರ್ಯವಾಗಿಲ್ಲ. ಎಲ್ಲವನ್ನೂ ಕೂಡಲೇ ತೆರವು ಮಾಡಲಾಗುತ್ತದೆ’ ಎಂದು ಜಿಬಿಎ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ. ಸುದರ್ಶನ್ ತಿಳಿಸಿದರು. ‘ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವ 30 ತಂಡಗಳ ಅವಧಿ ಮುಗಿಯುತ್ತಿದ್ದು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 66 ತಂಡಗಳನ್ನು ನಿಯೋಜಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಅವರಿಗೆ ಕಾರ್ಯಾದೇಶ ನೀಡಿ ಮುಂದಿನ ವಾರದಿಂದ ಅವರು ಕಾರ್ಯಾರಂಭಿಸುವ ಸಾಧ್ಯತೆ ಇದೆ. ಇದಲ್ಲದೆ 18 ಕ್ರೇನ್ಗಳನ್ನೂ ಖರೀದಿಸಲು ಟೆಂಡರ್ ಆಹ್ವಾನಿಸಲಾಗಿದೆ. ಮಳೆಗಾಲದ ವೇಳೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರಣ್ಯ ವಿಭಾಗದ ಸಿಬ್ಬಂದಿಯಿಂದ ಎಲ್ಲ ಸಾಧ್ಯವಾಗುವುದಿಲ್ಲ. ಇತರೆ ವಿಭಾಗಗಳೂ ಕೈಜೋಡಿಸುತ್ತಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.