ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾನ್ಸಿ ನೋಂದಣಿ ಸಂಖ್ಯೆ: ₹10 ಲಕ್ಷಕ್ಕೆ ಹರಾಜು

Last Updated 20 ಅಕ್ಟೋಬರ್ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳ ನೋಂದಣಿ ಸಂಖ್ಯೆ ಎಲ್ಲರಿಗಿಂತ ವಿಭಿನ್ನವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ವಾಹನ ಮಾಲೀಕರೊಬ್ಬರು ₹10 ಲಕ್ಷ ಸುರಿದಿದ್ದಾರೆ.

ಕೋರಮಂಗಲ ಪ್ರಾದೇಶಿಕ ಕಚೇರಿಯಲ್ಲಿ ಲಘು ವಾಹನಗಳ ಫ್ಯಾನ್ಸಿ ನೋಂದಣಿ ಸಂಖ್ಯೆಗೆ ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಿತು. ಆರಂಭಿಕ ಶುಲ್ಕವಾಗಿ ₹75 ಸಾವಿರ ನಿಗದಿ ಮಾಡಿತ್ತು. ಕೆಎ–01/ಎಂವಿ–0001 ಸಂಖ್ಯೆಗೆ ಬೇಡಿಕೆ ಹೆಚ್ಚಿತ್ತು. ಅಂತಿಮವಾಗಿ ಗುಲಾಮ್ ಮುಸ್ತಫಾ ಎಂಬುವರಿಗೆ ಗರಿಷ್ಠ ಮೊತ್ತ ₹10 ಲಕ್ಷಕ್ಕೆ ಬಿಡ್ ಅಂತ್ಯಗೊಂಡಿತು. ಒಟ್ಟು ₹10,75,000ಕ್ಕೆ ಈ ಸಂಖ್ಯೆ ಹರಾಜಾಯಿತು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಕೆಎ–01/ಎಂವಿ–9999 ಸಂಖ್ಯೆಯು ಭರತಕುಮಾರ್ ರೆಡ್ಡಿ ಎಂಬುವರಿಗೆ ₹3.40 ಲಕ್ಷಕ್ಕೆ, ಕೆಎ-01/ ಎಂವಿ-0009 ಸಂಖ್ಯೆಯು ಕೃಷ್ಣರೆಡ್ಡಿ ಎಂಬುವರಿಗೆ ₹3 ಲಕ್ಷಕ್ಕೆ, ಚಂದ್ರನ್ ರೆಡ್ಡಿ ಅವರಿಗೆ ಕೆಎ-01/ ಎಂವಿ-0999 ಸಂಖ್ಯೆ ₹1.30 ಲಕ್ಷಕ್ಕೆ ಹರಾಜಾಯಿತು.

‌ಉಳಿದಂತೆ ಇದೇ ಶ್ರೇಣಿಯ 0555 ಮತ್ತು 0011 ಸಂಖ್ಯೆಗಳು ಆರಂಭಿಕ ಬಿಡ್ ಹೊರತುಪಡಿಸಿಕ್ರಮವಾಗಿ ₹41 ಸಾವಿರ ಮತ್ತು ₹10 ಸಾವಿರಕ್ಕೆ ಹರಾಜಾದವು. 3333, 1111, 0003, 1459, 0777, 0099, 0005, 5555, 1989 ಸಂಖ್ಯೆಗಳು ₹1 ಸಾವಿರಕ್ಕೆ ಹರಾಜಾದವು ಎಂದು ಸಾರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT