ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾದಿ’ ಬಟ್ಟೆಯಲ್ಲಿ ರೂಪದರ್ಶಿಗಳ ಮಿಂಚು

ಪವಿತ್ರ ಆರ್ಥಿಕತೆ ಉಳಿವಿಗಾಗಿ ಸತ್ಯಾಗ್ರಹ
Last Updated 26 ಸೆಪ್ಟೆಂಬರ್ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ದಿನದಿಂದ ದಿನಕ್ಕೆ ಕುಸಿಯುತ್ತಿರುವ ದೇಶದ ಆರ್ಥಿಕತೆ ಉಳಿವಿಗಾಗಿ ಗ್ರಾಮ ಸೇವಾ ಸಂಘ ಹಮ್ಮಿಕೊಂಡಿರುವ ಸತ್ಯಾಗ್ರಹಕ್ಕೆ ‘ಫ್ಯಾಷನ್ ಷೋ’ ಮೂಲಕ ಗುರುವಾರ ಚಾಲನೆ ನೀಡಲಾಯಿತು.

ನಗರದ ಚರ್ಚ್ ಸ್ಟ್ರೀಟ್‌ನಲ್ಲಿರುವ ಪ್ರಸಾದ್ ಬಿದ್ದಪ್ಪ ಸಂಸ್ಥೆಯಲ್ಲಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮ ಹಳ್ಳಿಕೇರಿ ಹಾಗೂ ಕೈಮಗ್ಗ ಹೋರಾಟಗಾರ್ತಿ ಉಜ್ರಮ್ಮ ಅವರು ಸತ್ಯಾಗ್ರಹದ ಲಾಂಛನ ಬಿಡುಗಡೆ ಮಾಡಿದರು.

ಅದಾದ ನಂತರ, ನಗರದ 15 ಕಾಲೇಜುಗಳ 25ಕ್ಕೂ ಹೆಚ್ಚು ಯುವಕ– ಯುವತಿಯರು 25 ನಿಮಿಷ ಫ್ಯಾಷನ್ ಷೋ ನಡೆಸಿಕೊಟ್ಟರು. ‘ಪವಿತ್ರ ಬಟ್ಟೆ ಖಾದಿ’ ಎಂಬ ಧ್ಯೇಯ ದೊಂದಿಗೆ ಆರಂಭಿಸಲಾದ ಷೋನಲ್ಲಿ ಎಲ್ಲ ರೂಪದರ್ಶಿಗಳು, ಖಾದಿ ಬಟ್ಟೆಯಲ್ಲಿ ಸಿದ್ಧಪಡಿಸಿದ ಬಗೆಬಗೆಯ ಉಡುಪುಗಳನ್ನು ತೊಟ್ಟು ಮಿಂಚಿದರು.

ಫ್ಯಾಷನ್ ವಿನ್ಯಾಸಗಾರ ಪ್ರಸಾದ್ ಬಿದ್ದಪ್ಪ, ‘ಖಾದಿ ಬಟ್ಟೆಯೇ ಶ್ರೇಷ್ಠ ಹಾಗೂ ಪವಿತ್ರವಾದದ್ದು. ಇಂಥ ಬಟ್ಟೆ
ಯನ್ನು ಫ್ಯಾಷನ್‌ ಶೋಗೆ ಬಳಸಿದರೆ ರೂಪದರ್ಶಿಗಳ ವರ್ಚಸ್ಸು ಹೆಚ್ಚುತ್ತದೆ. ಜಪಾನ್‌ನಲ್ಲೂ ಈಗ ಖಾದಿ ಬಟ್ಟೆಗೆ ಬೇಡಿಕೆ ಬಂದಿದೆ’ ಎಂದರು.

ಆರ್ಥಿಕತೆ ಉಳಿದರೆ ಎಲ್ಲವೂ ಉಳಿದಂತೆ: ‘ದೇಶದ ಆರ್ಥಿಕತೆ ಉಳಿದರೆ ಮಾತ್ರ ಇತರೆ ಎಲ್ಲವೂ ಉಳಿಯಲು ಸಾಧ್ಯ. ಹೀಗಾಗಿ, ಆರ್ಥಿಕತೆ ಉಳಿವಿಗಾಗಿ ಈ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ರಾಜಕೀಯ ಪ‍ಕ್ಷದ ಹಾಗೂ ಕಾರ್ಮಿಕ ಸಂಘಟನೆಯ ಸತ್ಯಾಗ್ರಹವಲ್ಲ’ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT