ಬೆಂಗಳೂರು: ಲಕ್ಷಾಂತರ ರೂಪಾಯಿ ಮೌಲ್ಯದ ಕಂಪ್ಯೂಟರ್ ಬಿಡಿಭಾಗಗಳನ್ನು ಕಳವು ಮಾಡಿ ಪರಾರಿ ಆಗಿದ್ದ ತಂದೆ ಹಾಗೂ ಮಗನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗವಾರದ ಎಂ.ಹೇಮಂತ್ (21) ಹಾಗೂ ಆತನ ತಂದೆ ಎಂ.ಮಂಜುನಾಥ್ (45) ಬಂಧಿತರು.

ಬಂಧಿತರಿಂದ ₹80 ಲಕ್ಷ ಮೌಲ್ಯದ 444 ಡಿಡಿಆರ್ (4) ರ್ಯಾಮ್ ಹಾಗೂ 279 ಎಸ್ಎಸ್ಡಿ ಹಾರ್ಡ್ ಡಿಸ್ಕ್ ಹಾಗೂ ₹2.29 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ನಾಗವಾರದ ಟಿ.ಚನ್ನಯ್ಯ ಲೇಔಟ್ನ ಜಿ.ರಘು ಅವರು ನೀಡಿದ ದೂರಿನ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ರಘು ಅವರು ಎಚ್ಬಿಆರ್ ಲೇಔಟ್ನ ನಾಲ್ಕನೇ ಬ್ಲಾಕ್ನಲ್ಲಿ ಕಂಪ್ಯೂಟರ್ ಅಂಗಡಿ ಇಟ್ಟುಕೊಂಡಿದ್ದರು. ಮಾರ್ಚ್ 13ರಂದು ರಾತ್ರಿ ಅಂಗಡಿ ಬಂದ್ ಮಾಡಿಕೊಂಡು ಮನೆಗೆ ತೆರಳಿದ್ದರು. ಮರುದಿನ ಬಂದು ನೋಡಿದಾಗ ಅಂಗಡಿಯ ಬಾಗಿಲು ಒಡೆದು ಕಂಪ್ಯೂಟರ್ ಬಿಡಿಭಾಗಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದರು.

ನಾಗವಾರದ ಚಾಣಕ್ಯ ಲೇಔಟ್ನ ಮುಖ್ಯರಸ್ತೆಯ ಹೋಟೆಲ್ ಎದುರು ಆರೋಪಿ ಎಂ.ಹೇಮಂತ್ ನಿಂತಿದ್ದ. ಅಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಂದೆ ಎಂ. ಮಂಜುನಾಥ್ ಜತೆಗೆ ಸೇರಿಕೊಂಡು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದ. ಬಳಿಕ ಮಂಜುನಾಥ್ನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.