ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿಗಾಗಿ ತಂದೆ ಕೊಲೆಗೆ ಸುಪಾರಿ: ಪುತ್ರ, ಸಹೋದರ ಬಂಧನ

Last Updated 16 ಫೆಬ್ರುವರಿ 2021, 20:23 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಲು ಸುಪಾರಿ ನೀಡಿದ್ದ ಪುತ್ರ ಹಾಗೂ ಕೃತ್ಯದಲ್ಲಿ ಭಾಗಿಯಾಗಿದ್ದ ಚಿಕ್ಕಪ್ಪನನ್ನು ತಲಘಟ್ಟಪುರ ಪೊಲೀಸರು ಒಂದು ವರ್ಷದ ಬಳಿಕ ಬಂಧಿಸಿದ್ದಾರೆ.

ಪುತ್ರ ಹರಿಕೃಷ್ಣ ಹಾಗೂ ಚಿಕ್ಕಪ್ಪ ಶಿವರಾಮ್ ಪ್ರಸಾದ್ ಬಂಧಿತರು.

2020ರ ಫೆಬ್ರುವರಿಯಲ್ಲಿ ಬೆಂಗಳೂರಿನ ಗುಬ್ಬಲಾಳ ರಸ್ತೆಯಲ್ಲಿ ಮಾಧವ್ ಎಂಬುವವರ ಕೊಲೆಯಾಗಿತ್ತು. ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ತಂದೆಯ ಕೊಲೆಗೆ ಮಗಹರಿಕೃಷ್ಣ ಸುಪಾರಿ ನೀಡಿದ್ದ. ಕೊಲೆಯಾದ ಮಾಧವ್ ಸಹೋದರಶಿವರಾಮ್ ಪ್ರಸಾದ್ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದ.

ತನಿಖೆ ಆರಂಭಿಸಿದ್ದ ಪೊಲೀಸರು ಕಳೆದ ವರ್ಷವೇ ಆರೋಪಿಗಳಾದರಿಯಾಜ್ ಅಹಮದ್, ಶಾರುಖ್ ಖಾನ್, ಸೈಯ್ಯದ್ ಸಲ್ಮಾನ್, ಆದಿಲ್‌ ಖಾನ್, ಷಹಬಾಜ್ ನಜೀರ್‌ನನ್ನು ಬಂಧಿಸಿದ್ದರು. ಈಗ ಕೃತ್ಯಕ್ಕೆ ಕಾರಣಕರ್ತರಾದ ಹರಿಕೃಷ್ಣ ಹಾಗೂಶಿವರಾಮ್‌ನನ್ನು ಬಂಧಿಸಲಾಗಿದೆ.

‘ಗಣಿ ಉದ್ಯಮಿಯಾಗಿದ್ದಮಾಧವ್ ಅವರು ಕೋಟಿಗಟ್ಟಲೆ ಬೆಲೆಬಾಳುವ ಬಳ್ಳಾರಿ ಸ್ಟೀಲ್ ಮತ್ತು ಅಲಾಯ್ ಲಿಮಿಟೆಡ್ ಸಂಸ್ಥೆಗಳ ಮಾಲೀಕರಾಗಿದ್ದರು. ಗಣಿಗಾರಿಕೆ ನಿಂತಿದ್ದರಿಂದ ನಷ್ಟ ಅನುಭವಿಸಿದ್ದರು. ಆಸ್ತಿಯನ್ನು ಮಾರುವಂತೆ ಮಾಧವ್ ಅವರಿಗೆ‍ಪುತ್ರ ಹಾಗೂ ಸಹೋದರ ಸಲಹೆ ನೀಡಿದ್ದರು. ಮಾತು ಕೇಳಲಿಲ್ಲ ಎಂದು ಹಾಗೂ ಆಸ್ತಿ ಪಡೆದುಕೊಳ್ಳುವ ಉದ್ದೇಶದಿಂದ ಕೊಲೆ ಮಾಡಲು ಹಂತಕರಿಗೆ ಸುಪಾರಿ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT