7

ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಸನ್ಮಾನ

Published:
Updated:

ಬೆಂಗಳೂರು: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಕನ್ನಡ ಮಾಧ್ಯಮದ 10 ವಿದ್ಯಾರ್ಥಿಗಳಿಗೆ ಹಾಗೂ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಗೆಳೆಯರ ಬಳಗ ಸನ್ಮಾನವನ್ನು ಹಮ್ಮಿಕೊಂಡಿದೆ.

ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ, ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇಂತಹ ಸ್ಥಿತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವುದನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗ ತಿಳಿಸಿದೆ.

ಮೊದಲ ಹಂತವಾಗಿ ನಗರದಲ್ಲಿ ಹೆಚ್ಚು ಅಂಕ ಪಡೆದ ಭಾನುಪ್ರಿಯಾ, ಎಸ್. ಕಾವ್ಯಾ, ಆರ್. ಶಶಾಂಕ್, ಭಾಗ್ಯ ರಮೇಶ್ ಬಜಂತ್ರಿ, ಎಸ್. ಮಲ್ಲಿಕಾರ್ಜುನ್ ಕಾಲ್ನುರ‍್ಕರ್, ಎಚ್.ನಿರ್ಮಲಾ, ಎಲ್.ಆರ್. ಶಿಲ್ಪಶ್ರೀ, ಕೆ. ಪ್ರವೀಣ್, ಅಬ್ದುಲ್ ಕಬೀರ್ ವಿದ್ಯಾರ್ಥಿಗಳಿಗೆ ₹1,000 ನಗದು ಬಹುಮಾನ ನೀಡಲಾಗುತ್ತಿದೆ. ಈ ವಿದ್ಯಾರ್ಥಿಗಳ ಜೊತೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದಿರುವ ಕನ್ನಡ ಮಾತೃ ಭಾಷೆಯಲ್ಲದ 5 ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದೆ.

ಜುಲೈ 4ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕರ್ನಾಟಕ ಕಾರ್ಮಿಕಲೋಕದ ‘ಕಾರ್ಮಿಕ ಕಲಾಮಿಲನ’, ‘ಕಾರ್ಮಿಕ ಲೋಕ ಪುರಸ್ಕಾರ’ ಸಮಾರಂಭದಲ್ಲಿ ಪುರಸ್ಕರಿಸಲಾಗುವುದು ಎಂದಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !