ಶನಿವಾರ, ಜನವರಿ 25, 2020
22 °C

ಪತ್ನಿ ಐಷಾರಾಮಿ ಜೀವನಕ್ಕೆ ನೊಂದು ಟೆಕ್ಕಿ ಆತ್ಮಹತ್ಯೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೆಂಡತಿಯ ಕಿರುಕುಳ ತಾಳಲಾರದೆ ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಸಂಜೆ ಇಲ್ಲಿನ  ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ. 

ಮೃತ ಶ್ರೀನಾದ್ ಆಂಧ್ರಪ್ರದೇಶ ಮೂಲದವರಾಗಿದ್ದು ಸಾಪ್ಟ್‌ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀನಾದ್‌ ಬ್ಯಾಂಕ್‌ನಿಂದ ಸಾಲಮಾಡಿ ಮನೆ ಖರೀದಿಸಿದ್ದರು. ದುಂದು ವೆಚ್ಚ ಮಾಡದಂತೆ ಪತ್ನಿಗೆ ತಿಳಿ ಹೇಳಿದ್ದರು.  ಅದರೆ ಹೆಂಡತಿ ರೇಖಾ ಐಷಾರಾಮಿ ಜೀವನ ನಡೆಸಿ ಅಧಿಕ ವೆಚ್ಚ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಖರ್ಚು ಕಡಿಮೆ ಮಾಡುವಂತೆ ಪತ್ನಿಗೆ ಶ್ರೀನಾದ್‌​ ಸಲಹೆ ನೀಡುತ್ತಿದ್ದರೂ ಲೆಕ್ಕಿಸದೆ ದುಂದು ವೆಚ್ಚ ಮಾಡುವುದು ಮುಂದುವರಿಸಿದ್ದರು. ಶ್ರೀನಾದ್‌ಗೆ ಪತ್ನಿ ನಿತ್ಯ ಮಾನಸಿಕ ಕಿರುಕುಳ ನೀಡಿದ್ದು, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. 

ರೇಖಾ ಆಸ್ತಿಯನ್ನು ತನ್ನ ತಂದೆಯ ಹೆಸರಿಗೆ ವರ್ಗಾಯಿಸುವಂತೆ ಶ್ರೀನಾದ್‌ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ರೇಖಾ ಮತ್ತು ಅವರ ಹೆತ್ತವರ ಮೇಲೆ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು