ಫುಟ್‌ಪಾತ್‌ ಮೇಲೆ ಚಾಲನೆ: 912 ಮಂದಿಗೆ ದಂಡ

7

ಫುಟ್‌ಪಾತ್‌ ಮೇಲೆ ಚಾಲನೆ: 912 ಮಂದಿಗೆ ದಂಡ

Published:
Updated:

ಬೆಂಗಳೂರು: ಫುಟ್‌ಪಾತ್‌ ಮೇಲೆ ಬೈಕ್ ಓಡಿಸಿದ್ದ 912 ಮಂದಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.

ನಗರದಲ್ಲಿ ಎರಡು ದಿನ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೆಲವು ಚಾಲಕರ ಚಾಲನಾ ಪರವಾನಗಿ ರದ್ದುಪಡಿಸಲು ಸಾರಿಗೆ ಇಲಾಖೆಗೆ ಪ್ರಸ್ತಾವವನ್ನೂ ಕಳುಹಿಸಿದ್ದಾರೆ.

‘ಫುಟ್‌ಪಾತ್‌ ಮೇಲೆ ಬೈಕ್ ಓಡಿಸುತ್ತಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಆ ಬಗ್ಗೆ ದೂರುಗಳು ಬಂದಿದ್ದವು. ಆಯಾ ಠಾಣೆ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಿ, ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಅನುಪಮ್ ಅಗರವಾಲ್ ತಿಳಿಸಿದರು.

317 ಸೈಲೆನ್ಸರ್ ಜಪ್ತಿ: ಕರ್ಕಶ ಧ್ವನಿ ಮಾಡುವ 317 ಸೈಲೆನ್ಸರ್‌ಗಳನ್ನು ಪೊಲೀಸರು ಜಪ್ತಿ ಮಾಡಿದರು. ನಗರದ ಹಲವೆಡೆ ಬೈಕ್‌ಗಳನ್ನು ತಡೆದು ಪರಿಶೀಲನೆ ನಡೆಸಿದ ಪೊಲೀಸರು, ಸೈಲೆನ್ಸರ್‌ಗಳನ್ನು ಸ್ಥಳದಲ್ಲೇ ಬಿಚ್ಚಿ ಸುಪರ್ದಿಗೆ ಪಡೆದುಕೊಂಡರು. ಸವಾರರಿಗೆ ದಂಡವನ್ನೂ ವಿಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !