ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರಿಗೆ ₹ 82 ಲಕ್ಷ ದಂಡ

7

ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರಿಗೆ ₹ 82 ಲಕ್ಷ ದಂಡ

Published:
Updated:

ಬೆಂಗಳೂರು: ಷರತ್ತು ಉಲ್ಲಂಘನೆ, ಶುಚಿತ್ವ ಕಾಪಾಡದಿರುವುದು ಹಾಗೂ ಆಹಾರದ ಗುಣಮಟ್ಟ ಕಳಪೆಯಾಗಿರುವುದು ಸೇರಿದಂತೆ ಹಲವು ಕಾರಣಗಳಿಗಾಗಿ ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರಿಗೆ ಬಿಬಿಎಂಪಿ ₹ 82.55 ಲಕ್ಷ ದಂಡ ವಿಧಿಸಿದೆ.

‘ಗುತ್ತಿಗೆದಾರರಿಗೆ ಬಿಬಿಎಂಪಿ ಪಾವತಿಸುವ ಮೊತ್ತದಲ್ಲಿ ದಂಡದ ಹಣ ಕಡಿತ ಗೊಳಿಸಲಾಗುವುದು’ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಹೇಳಿದರು. 

ಕ್ಯಾಂಟೀನ್‌ ಕಾರ್ಯನಿರ್ವಹಣೆ ಮೇಲೆ ನಿಗಾ ವಹಿಸಲು ಬಿಬಿಎಂಪಿ ಸಿಬ್ಬಂದಿ ನೇಮಿಸಿದೆ. ಈ ವೀಕ್ಷಕರು ನೀಡಿರುವ ದೂರುಗಳ ಆಧಾರದ ಮೇಲೆ ಗುತ್ತಿಗೆದಾರ ಸಂಸ್ಥೆಗಳಾದ ಚೆಫ್‌ಟಾಕ್‌ ಮತ್ತು ರಿವಾರ್ಡ್ಸ್‌ಗೆ ದಂಡ ವಿಧಿಸಿದ್ದಾರೆ.

ಏನೇನು ಕಾರಣ?: ‘ಸ್ವಚ್ಛತೆ ಕಾಪಾಡದಿರುವುದು, ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ತಡವಾಗುವುದು, ನಿಗದಿತ ಪ್ರಮಾಣದ ಆಹಾರ ವಿತರಿಸದಿರುವುದು, ಗುಣಮಟ್ಟ ಕಾಪಾಡದಿರುವುದು, ಸಿಬ್ಬಂದಿ ಸಮವಸ್ತ್ರ ಧರಿಸದಿರುವುದು, ಸಿಬ್ಬಂದಿ ದುರ್ನಡತೆ ಸೇರಿದಂತೆ ಹಲವಾರು ಕಾರಣಗಳಿವೆ. ಈ ರೀತಿ ಕಠಿಣವಾಗಿ ದಂಡ ವಿಧಿಸುವುದು ಮತ್ತು ನಿಗಾ ವಹಿಸುವುದರಿಂದಾಗಿಯೇ ಕ್ಯಾಂಟೀನ್‌ಗಳು ಸುಸೂತ್ರವಾಗಿ ನಡೆಯುತ್ತಿವೆ’ ಎಂದು ಶಿವರಾಜು ಹೇಳಿದರು. 

‘ಕ್ಯಾಂಟೀನ್‌ ಆರಂಭವಾದ ಕೆಲವು ತಿಂಗಳುಗಳ ಬಳಿಕ ಪಾಲಿಕೆ ಆಡಳಿತವು ನಿವೃತ್ತ ಮಾರ್ಷಲ್‌ಗಳನ್ನು ಜ್ಯೂನಿಯರ್‌ ಕಮಿಷನ್ಡ್‌ ಆಫೀಸರ್ಸ್‌ ಎಂದು ನೇಮಿಸಿಕೊಂಡಿತ್ತು. ಇವರು ಕ್ಯಾಂಟೀನ್‌ಗಳ ಆಹಾರದ ಗುಣಮಟ್ಟ, ನಿರ್ವಹಣೆ, ಸೇವೆ ಒದಗಿಸುವ ಬಗ್ಗೆ ನಿಗಾ ವಹಿಸುತ್ತಾರೆ. ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಬ್ಬೊಬ್ಬರಂತೆ ಕಮಿಷನ್ಡ್‌ ಆಫೀಸರ್‌ಗಳನ್ನು ನೇಮಿಸಲಾಗಿದೆ. ಅವರಿಗೆ ಕ್ಯಾಂಟೀನ್‌ ನಿರ್ವಹಣೆ ಸಂಬಂಧಿಸಿದ ತರಬೇತಿ ನೀಡಲಾಗಿದೆ. ಕ್ಯಾಂಟೀನ್‌ ಸಾಮಗ್ರಿಗಳು, ಮೂಲಸೌಲಭ್ಯವನ್ನು ನೋಡಿಕೊಳ್ಳುವುದು, ಗ್ರಾಹಕರ ಪ್ರತಿಕ್ರಿಯೆ ಪಡೆಯುವುದೂ ಅವರ ಕೆಲಸ’ ಎಂದು ಶಿವರಾಜು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !