ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎಂಎ ಕಾಯ್ದೆ ಉಲ್ಲಂಘನೆ ಆರೋಪ: ಬಿಬಿಎಂಪಿ ಸದಸ್ಯೆ ಪತಿ ವಿರುದ್ಧ ಎಫ್ಐಆರ್

Last Updated 15 ಮೇ 2020, 15:21 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಿಬಿಎಂಪಿ ಸದಸ್ಯೆ ಪ್ರತಿಭಾ ಧನರಾಜ್ ಅವರ ಪತಿ ಧನರಾಜ್ ಸೇರಿದಂತೆ ಆರು ಜನರ ವಿರುದ್ದ ಎನ್‌ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ) ಅಡಿ ಕಲಾಸಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬಿಬಿಎಂಪಿ ಅಧಿಕಾರಿಗಳ ಜೊತೆ ಪಾದಾಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲು ತೆರಳಿದ ವೇಳೆ ಧನರಾಜ್ ಮತ್ತು ಮಗ ವೈಷ್ಣವ್ ಮೇಲೆ ಬುಧವಾರ ಬೆಳಿಗ್ಗೆ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿಸಗಣಿ ಎರಚಿದ ಘಟನೆ ನಡೆದಿತ್ತು. ಇದನ್ನು ಪ್ರತಿಭಟಿಸಿ ಮಾಸ್ಕ್ ಧರಿಸದೆ 15 ರಿಂದ 30 ಮಂದಿ ಕಲಾಸಿಪಾಳ್ಯದ ಕೆ‌ಎಂ ರಸ್ತೆಯಲ್ಲಿ ಗುಂಪು ಸೇರಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾ ಕೋವಿಡ್-19 ವೈರಸ್ ಹರಡುವಿಕೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿಯಮ ಉಲ್ಲಂಘಿಸಿಸಲಾಗಿದೆ. ಲಾಕ್‌ಡೌನ್ ನಿಯಮಗಳು ಹಾಗೂ 144 ಸೆಕ್ಷನ್ ಉಲ್ಲಂಘಿಸಿದ ಆರೋಪದಲ್ಲಿ ಕಲಾಸಿಪಾಳ್ಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT