ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ ಮಹಿಳೆಯರ ವಿರುದ್ಧ ಎಫ್‌ಐಆರ್‌

Last Updated 22 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಬೆಂಗಳೂರು: ಬಿಸಿನೆಸ್‌ ವೀಸಾ ಪಡೆದು ಭಾರತಕ್ಕೆ ಬಂದು ವೀಸಾ ನಿಯಮ ಉಲ್ಲಂಘಿಸಿದ್ದ ಥಾಯ್ಲೆಂಡ್‌ನ ಆರು ಮಹಿಳೆಯರೂ ಸೇರಿದಂತೆ ಒಟ್ಟು ಎಂಟು ಮಂದಿಯ ವಿರುದ್ಧ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮ್ಮನಹಳ್ಳಿ ಮುಖ್ಯರಸ್ತೆಯ ಬಿಎಸ್‌ಆರ್‌ ಕಾಂಪ್ಲೆಕ್ಸ್‌ನ 4ನೇ ಮಹಡಿಯಲ್ಲಿ ಔರಾ ಇಂಟರ್‌ನ್ಯಾಷನಲ್‌ ಥಾಯ್ ಸ್ಪಾದಲ್ಲಿ ಈ ಮಹಿಳೆಯರು ಮಸಾಜ್‌ ಕೆಲಸ ಮಾಡುತ್ತಿದ್ದರು.

‘ವೀಸಾ ನಿಯಮ ಉಲ್ಲಂಘಿಸಿ ನಗರದಲ್ಲಿ ನೆಲೆಸಿದ್ದರೂ ಥಾಯ್ಲೆಂಡ್‌ ಮಹಿಳೆಯರಿಗೆ ಸ್ಪಾದ ಮಾಲೀಕರು ಕೆಲಸಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಸ್ಪಾ ಮಾಲೀಕ ಅಬ್ದುಲ್‌ ಮುಕಿತ್‌, ವ್ಯವಸ್ಥಾಪಕ ಶಿವರಾಜು ಸೇರಿದಂತೆ ಆರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT