ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಎಂ.ಜಿ ರಸ್ತೆಯ ಫರಾ ಟವರ್‌ನಲ್ಲಿ ಬೆಂಕಿ ಅವಘಡ

Last Updated 18 ಸೆಪ್ಟೆಂಬರ್ 2019, 11:47 IST
ಅಕ್ಷರ ಗಾತ್ರ

ಬೆಂಗಳೂರು: ಎಂ.ಜಿ. ರಸ್ತೆಯಲ್ಲಿರುವ ಆರು ಅಂತಸ್ತಿನ ಕಟ್ಟಡ ಫರಾ ಟವರ್‌ನಲ್ಲಿ ಬುಧವಾರ ಮಧ್ಯಾಹ್ನ 2.45ರ ಸುಮಾರಿಗೆ ಬೆಂಕಿ ಅವಘಢ ಸಂಭವಿಸಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪಕ್ಕದ ಬಾರ್ಟನ್‌ ಸೆಂಟರ್‌ ಕಟ್ಟಡ ನಿರ್ವಹಣೆ ನೋಡಿಕೊಳ್ಳುವ ನೌಕರರು ಧಾವಿಸಿ ಬಂದು ಕಟ್ಟಡದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ.

ನೆಲಮಹಡಿಯಲ್ಲಿ ಯುಕೋ ಬ್ಯಾಂಕಿನ ಶಾಖೆ ಇದ್ದು, ಮಹಡಿಗಳಿಗೆ ಹೋಗುವ ಮೆಟ್ಟಿಲುಗಳಿರುವ ಬಳಿಯಲ್ಲಿ ಕಟ್ಟಡಕ್ಕೆ ವಿದ್ಯುತ್‌ ಪೂರೈಸುವ ನಿಯಂತ್ರಣ ಪ್ಯಾನೆಲ್‌ ಇದೆ. ಇಲ್ಲಿ ಸಣ್ಣಗೆ ಕಾಣಿಸಿಕೊಂಡ ಬೆಂಕಿಯಿಂದ ವಿದ್ಯುತ್‌ ಉಪಕರಣಗಳು ಸುಡಲು ಆರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡದಲ್ಲಿ ದಟ್ಟವಾದ ಹೊಗೆ ತುಂಬಿಕೊಂಡಿದೆ.

ಬೆಂಕಿ ಹೊತ್ತಿಕೊಂಡು ಮೇಲಿನ ಮಹಡಿಗಳಿಗೆ ಹೊಗೆ ಆವರಿಸುತ್ತಿದ್ದಂತೆ ಕಟ್ಟಡದಲ್ಲಿದ್ದವರು ಜೀವ ರಕ್ಷಣೆಗಾಗಿ ಕಿಟಕಿ ಒಡೆದು ಹೊರಗೆ ಬರುತ್ತಿರುವುದು.
ಬೆಂಕಿ ಹೊತ್ತಿಕೊಂಡು ಮೇಲಿನ ಮಹಡಿಗಳಿಗೆ ಹೊಗೆ ಆವರಿಸುತ್ತಿದ್ದಂತೆ ಕಟ್ಟಡದಲ್ಲಿದ್ದವರು ಜೀವ ರಕ್ಷಣೆಗಾಗಿ ಕಿಟಕಿ ಒಡೆದು ಹೊರಗೆ ಬರುತ್ತಿರುವುದು.

ಇದ್ದಕ್ಕಿದ್ದಂತೆ ದಟ್ಟ ಹೊಗೆ ಆವರಿಸಿಕೊಳ್ಳುತ್ತಿದ್ದಂತೆ ಕಟ್ಟಡದ ಎರಡನೇ ಮಹಡಿಯಲ್ಲಿರುವ ಡಿಟಿಡಿಸಿ ಕೊರಿಯರ್‌ ಸೆಂಟರ್‌, ಮೂರನೇ ಮಹಡಿಯಲ್ಲಿರುವ ಐಟಿ ತರಬೇತಿ ಸಂಸ್ಥೆ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ 150ಕ್ಕೂ ಹೆಚ್ಚು ಮಂದಿ ಗಾಬರಿಗೊಂಡಿದ್ದಾರೆ. ಅಷ್ಟೇ ಅಲ್ಲದೆ, ಕಟ್ಟಡದಿಂದ ಕೆಳಗೆ ಜಿಗಿಯಲು ಮುಂದಾಗಿದ್ದಾರೆ.

ಅಗ್ನಿಶಾಮಕ ಮತ್ತು ತುರ್ತುಸೇವಾ ವಾಹನಗಳು ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸಿದರು.

ಆರು ಅಂತಸ್ತಿನ ಈ ಕಟ್ಟಡದಲ್ಲಿ ನೆಲಮಾಳಿಗೆ ಸೇರಿ ಎರಡು ಅಂತಸ್ತಿನಲ್ಲಿ ಬ್ಯಾಂಕ್‌ ಇದೆ. ಮೂರನೇ ಮಹಡಿಯಲ್ಲಿ ಕಂಪ್ಯೂಟರ್‌ ತರಬೇತಿ ಕೇಂದ್ರ ಇದೆ. 120 ವಿದ್ಯಾರ್ಥಿಗಳು ಹಾಗೂ ಸಾಕಷ್ಟು ಮಂದಿ ಬ್ಯಾಂಕ್‌ ಸಿಬ್ಬಂದಿ ಈ ಕಟ್ಟಡದಲ್ಲಿದ್ದರು.

ಫರಾ ಟವರ್‌ನಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಹೊರ ಬರುತ್ತಿದ್ದಂತೆ ರಸ್ತೆಯಲ್ಲಿ ಜನ ಜಮಾಯಿಸಿದರು.
ಫರಾ ಟವರ್‌ನಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಹೊರ ಬರುತ್ತಿದ್ದಂತೆ ರಸ್ತೆಯಲ್ಲಿ ಜನ ಜಮಾಯಿಸಿದರು.

‘ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪವರ್‌ ಯೂನಿಟ್‌ ಬಂದ್‌ ಮಾಡಲಾಯಿತು. ಆದರೂ ಬೆಂಕಿ ಕ್ಷಣದಲ್ಲಿ ಎಲ್ಲೆಡೆ ಹಬ್ಬಿತು. ಐಟಿ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಗಾಬರಿಗೊಂಡಿದ್ದು, ಎಲ್ಲರನ್ನು ಹೊರಗೆ ಕರೆತರಲಾಗುತ್ತಿದೆ’ ಎಂದು ಲಿಫ್ಟ್ ಆಪರೇಟರ್‌ ತಿಳಿಸಿದರು.

ಬೆಂಕಿಯಿಂದಾಗಿ ಎಲ್ಲೆಡೆ ಹೊಗೆ ತುಂಬಿಕೊಂಡಿದ್ದರಿಂದ ತರಬೇತಿ ಕೇಂದ್ರದ ಗ್ಲಾಸ್‌ ಒಡೆಯಲಾಗಿದೆ.

ಬೆಂಕಿ ಹೊತ್ತಿಕೊಂಡಿದ್ದ ಸ್ಥಳ
ಬೆಂಕಿ ಹೊತ್ತಿಕೊಂಡಿದ್ದ ಸ್ಥಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT