ಬೆಂಗಳೂರು: ನಗರದ ಉಲ್ಲಾಳ ಮುಖ್ಯ ರಸ್ತೆಯಲ್ಲಿರುವ ಡಾಮಿನೋಸ್ ಪಿಜ್ಜಾ ಕಟ್ಟಡದ ನೆಲಮಾಳಿಗೆಯಲ್ಲಿ ನಿಲುಗಡೆ ಮಾಡಿದ್ದ 12 ದ್ವಿಚಕ್ರ ವಾಹನಗಳು ಭಾನುವಾರ ಬೆಳಗಿನ ಜಾವ ಬೆಂಕಿಗಾಹುತಿಯಾಗಿವೆ.

ಉಲ್ಲಾಳ ಮುಖ್ಯರಸ್ತೆಯಲ್ಲಿ ಸಚಿನ್ ಬೋರೇಗೌಡ ಎಂಬುವರು ಡಾಮಿನೋಸ್ ಪಿಜ್ಜಾ ಮಳಿಗೆ ನಡೆಸುತ್ತಿದ್ದಾರೆ. ಆಹಾರ ಪದಾರ್ಥಗಳ ಡೆಲಿವರಿಗೆ ಬಳಸುವ ದ್ವಿಚಕ್ರ ವಾಹನಗಳನ್ನು ಕಟ್ಟಡದ ನೆಲಮಾಳಿಗೆಯಲ್ಲಿ ನಿಲುಗಡೆ ಮಾಡಲಾಗಿತ್ತು.

ಭಾನುವಾರ ಮುಂಜಾನೆ ಮೂರು ಗಂಟೆ ಸುಮಾರಿಗೆ ಶಾರ್ಟ್ ಸರ್ಕೀಟ್ ಉಂಟಾಗಿ, ಬೆಂಕಿ ಕಾಣಿಸಿಕೊಂಡ ಪರಿಣಾಮ 11 ಎಲೆಕ್ಟ್ರಿಕ್ ಬೈಕ್ಗಳು, ಒಂದು ಬಜಾಜ್ ಪಲ್ಸರ್ ಹಾಗೂ ಜನರೇಟರ್ ಸುಟ್ಟು ಹೋಗಿವೆ.

ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದರು. ಸ್ಥಳಕ್ಕೆ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.