ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಕೆವಿಕೆ ಆವರಣದಲ್ಲಿ 2 ಕಡೆ ಆಕಸ್ಮಿಕ ಬೆಂಕಿ

Last Updated 8 ಮಾರ್ಚ್ 2023, 20:46 IST
ಅಕ್ಷರ ಗಾತ್ರ

ಯಲಹಂಕ: ಜಿಕೆವಿಕೆ ಆವರಣದ ಎರಡು ಕಡೆ ಹುಲ್ಲುಗಾವಲು ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು.

ಪ್ರವೇಶದ್ವಾರದ ಅನತಿ ದೂರದಲ್ಲಿರುವ ಸೇತುವೆಯ ಕೆಳಭಾಗದ ರೈಲು ಹಳಿಯ ಬಳಿ ಮಧ್ಯಾಹ್ನ 1.30ರ ವೇಳೆ ಹುಲ್ಲಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಕೃಷಿ ವಿವಿಯ ಕ್ಷೇತ್ರ ವಿಭಾಗದ ರಕ್ಷಣಾ ತಂಡವು ಎರಡು ಟ್ಯಾಂಕರ್ ಮತ್ತು ಮೋಟಾರ್ ಸಮೇತ ಸ್ಥಳಕ್ಕೆ ಧಾವಿಸಿ, 20 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ನಡೆಸಿ ಬೆಂಕಿ ನಂದಿಸಿತು.

ಅದಾದ ಮೇಲೆ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ಗೇಟ್‌ ಬಳಿ ಮಧ್ಯಾಹ್ನ 3.30ರ ವೇಳೆಯಲ್ಲಿ ಸುಮಾರು 6 ಅಡಿಗಳಷ್ಟು ಎತ್ತರಕ್ಕೆ ಬೆಳೆದುನಿಂತಿದ್ದ ಹುಲ್ಲಿಗೆ ಬೆಂಕಿ ತಗುಲಿ ದೊಡ್ಡ ಪ್ರಮಾಣದಲ್ಲಿ ಹೊತ್ತಿ ಉರಿಯಿತು.

ಕೆಲಕಾಲ ಬೆಂಕಿಯ ಜ್ವಾಲೆಯೊಂದಿಗೆ ದಟ್ಟವಾದ ಹೊಗೆ ಆವರಿಸಿತು. ಎರಡು ಅಗ್ನಿಶಾಮಕದಳದ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ, ಒಂದು ಗಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು.

ಹುಲ್ಲಿಗೆ ಬೆಂಕಿ ತಗುಲಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ತಕ್ಷಣ ಮುಂಜಾಗ್ರತೆ ವಹಿಸಿದ್ದರಿಂದ ಯಾವುದೇ ನಷ್ಟ ಅಥವಾ ಮರಗಳಿಗೆ ಹಾನಿಯಾಗಿಲ್ಲ ಎಂದು ಕೃಷಿ ವಿಶ್ವವಿದ್ಯಾಲಯದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಎ.ಪಿ.ಮಲ್ಲಿಕಾರ್ಜುನಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT