ಗುರುವಾರ , ಮಾರ್ಚ್ 4, 2021
26 °C

ಬ್ಯಾಂಕ್‌ ಹಣ ವಸೂಲಿಗೆ ತೆರಳಿದವರ ಮೇಲೆ ಗುಂಡಿನ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಂಕ್ ಹಣ ವಸೂಲಿಗೆ ಹೋಗಿದ್ದ ಅಬ್ದುಲ್ ಸಮದ್ ಎಂಬುವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ‌.

ಹಣ ವಸೂಲಿ ಮಾಡಲು ಹೋಗಿದ್ದಾಗ ಬಾಣಸವಾಡಿ ಬಳಿಯ  ಅಪಾರ್ಟ್‌ಮೆಂಟ್ ಒಂದರಲ್ಲಿ ಈ ನಡೆದ ಘಟನೆ ನಡೆದಿದೆ.

ಅಬ್ದುಲ್ ಸಮದ್‌ ಅವರ ಎದೆ ಭಾಗಕ್ಕೆ ಗುಂಡು ತಗುಲಿದೆ. ಸಮದ್‌ನ ಸಹೋದರ ಸೈಯದ್, ಎಚ್‌ಡಿಎಫ್‌ಸಿ ಬ್ಯಾಂಕ್ ಹಣ ವಸೂಲಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ₹20  ಲಕ್ಷ ವಾಹನ ಸಾಲ ವಸೂಲಿ ಮಾಡಲು ಸಮದ್ ಸಹೋದರನ ಜೊತೆ ಹೋಗಿದ್ದರು. 

ಮಾತಿಗೆ ಮಾತು ಬೆಳೆದು ಸಾಲಗಾರನೇ ಗನ್ ನಿಂದು ಶೂಟ್ ಮಾಡಿದ್ದಾನೆ ಎನ್ನಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು