ಭಾನುವಾರ, ನವೆಂಬರ್ 17, 2019
28 °C

ನೆರೆ ಪರಿಹಾರಕ್ಕೆ ₹ 46 ಲಕ್ಷ ದೇಣಿಗೆ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳದ ಮೊತ್ತ ₹ 44.70 ಲಕ್ಷವನ್ನು ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ನೀಡಿದ್ದಾರೆ.

ಕುಲಪತಿ ಪ್ರೊ.ಕೆ. ಆರ್. ವೇಣುಗೋಪಾಲ್ ಅವರು ತಮ್ಮ ಒಂದು ತಿಂಗಳದ ಸಂಬಳದ ಹಣ ₹ 1.44 ಲಕ್ಷವನ್ನು ಪರಿಹಾರ ನಿಧಿಗೆ ನೀಡಿದ್ದಾರೆ.

ಕುಲಪತಿ ಪ್ರೊ. ಕೆ. ಆರ್. ವೇಣುಗೋಪಾಲ್ ಅವರು ಇತರ ಹಿರಿಯ ಅಧಿಕಾರಿಗಳು, ಹಿರಿಯ ಪ್ರಾಧ್ಯಾಪಕರ ಜತೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ತೆರಳಿ ಚೆಕ್‌ ಹಸ್ತಾಂತರಿಸಿದರು.

ಪ್ರತಿಕ್ರಿಯಿಸಿ (+)