ಭಾನುವಾರ, ಆಗಸ್ಟ್ 25, 2019
28 °C

ಫಲಪುಷ್ಪ ಪ್ರದರ್ಶನ ಮೆಟ್ರೊಂದಿಗೆ ಕಾಗದದ ಟಿಕೆಟ್‌

Published:
Updated:

ಬೆಂಗಳೂರು: ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ ಮೆಟ್ರೊ ಪ್ರಯಾಣಿಕರ ಅನುಕೂಲಕ್ಕಾಗಿ ಟೋಕನ್‌ ಬದಲಾಗಿ ಕಾಗದದ ಟಿಕೆಟ್‌ ನೀಡಲು ಬಿಎಂಆರ್‌ಸಿಲ್‌ ನಿರ್ಧರಿಸಿದೆ. 

ಲಾಲ್‌ಬಾಗ್‌ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ತಡೆಯಲು ನಿಗಮವು ಈ ನಿರ್ಧಾರ ಕೈಗೊಂಡಿದೆ. ಇದೇ 10ರಿಂದ 12ರವರೆಗೆ ಹಾಗೂ ಆ.15, 17 ಹಾಗೂ 18ರಂದು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಲಾಲ್‌ಬಾಗ್‌ನಿಂದ ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸುವುದಿದ್ದರೂ, ‍ಪ್ರಯಾಣಿಕರು ₹30ರ ಕಾಗದದ ಟಿಕೆಟ್‌ ಪಡೆದುಕೊಳ್ಳುವುದು ಕಡ್ಡಾಯ. ಈ ದಿನಗಳಲ್ಲಿ ಲಾಲ್‌ಬಾಗ್‌ ನಿಲ್ದಾಣದಲ್ಲಿ ಟೋಕನ್‌ ನೀಡಲಾಗುವುದಿಲ್ಲ. ಆದರೆ, ಸ್ಮಾರ್ಟ್‌ಕಾರ್ಡ್‌ಗಳನ್ನು ಪ್ರಯಾಣಿಕರು ಬಳಸಬಹುದಾಗಿದೆ. 

ಯಾವ ದಿನದಂದು ಕಾಗದದ ಟಿಕೆಟ್‌ ಖರೀದಿ ಮಾಡುತ್ತಾರೋ, ಆ ದಿನದ ಪ್ರಯಾಣಕ್ಕೆ ಮಾತ್ರ ಅದು ಅನ್ವಯಿಸಲಿದೆ. 

Post Comments (+)