ಸೋಮವಾರ, ಡಿಸೆಂಬರ್ 16, 2019
18 °C

ಬಲವಂತದ ಗರ್ಭಪಾತ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಆಡಳಿತ ಮಂಡಳಿಯವರು ಬಲವಂತವಾಗಿ ಗರ್ಭಪಾತ ಆಗು ವಂತೆ ಮಾಡಿದ್ದಾರೆ’ ಎಂದು ಆರೋ ಪಿಸಿ ಆಸ್ಟರ್‌ ಸಿಎಂಐ ಆಸ್ಪತ್ರೆಯ ಟೆಕ್ನಿಶಿ ಷಿಯನ್‌ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸಹಕಾರ ನಗರದಲ್ಲಿರುವ ಆಸ್ಟರ್‌ ಸಿಎಂಐ ಆಸ್ಪತ್ರೆಯ ಸಿಇಒ ನಿತೀಶ್‌ ಶೆಟ್ಟಿ, ಸಿಒಒ ರಮೇಶ್‌, ಎಚ್‌ಆರ್‌ಗಳಾದ ದುರ್ಗಾಪ್ರಸಾದ್‌ ಮತ್ತು ಮಾರುತಿ ಎಂಬುವರ ವಿರುದ್ಧ ಯಲಹಂಕದ ಮಾರುತಿನಗರದ ನಿವಾಸಿ, 30 ವರ್ಷದ ಮಹಿಳೆ ದೂರು ನೀಡಿದ್ದಾರೆ.

‘ನಾನು ಗರ್ಭಿಣಿಯಾಗಿರುವ ವಿಷ ಯವನ್ನು ಆಡಳಿತ ಮಂಡಳಿ ಗಮನಕ್ಕೆ ತಂದಾಗ, ‘ನೀನು ಅಬಾರ್ಷನ್‌ ಮಾಡಿಸಿ ಕೊ. ಇಲ್ಲದಿದ್ದರೆ ಕೆಲಸದಿಂದ ವಜಾ ಮಾಡುತ್ತೇವೆ’ ಎಂದು ದುರ್ಗಾಪ್ರಸಾದ್‌ ಹೆದರಿಸಿದ್ದರು. ಕೆಲಸ ಬಿಡುವಂತೆ ಒತ್ತಾಯಿಸಿದಾಗ ನಾನು ರಾಜೀನಾಮೆ ಕೊಟ್ಟಿದ್ದೇನೆ. ನಿಯಮದಂತೆ ರಾಜೀ ನಾಮೆ ನೀಡಿದ ಬಳಿಕ ತಿಂಗಳ ಕೆಲಸ ಮಾಡಬೇಕಾಗಿತ್ತು. ಈ ಸಮಯದಲ್ಲಿ, ನನ್ನ ಪತಿಯ ಗಮನಕ್ಕೂ ತರದೆ ಜುಲೈ 27ರಂದು ಕೆಲವು ಮಾತ್ರೆ ಗಳನ್ನು ಕೊಟ್ಟು, 29ರಂದು ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾರೆ’ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ಮಹಿಳೆಯ ಆರೋಪ ಆಧಾರರಹಿತ’

ಆಸ್ಟರ್‌ ಸಿಎಂಐ ಆಸ್ಪತ್ರೆ ಆಡಳಿತ ಮಂಡಳಿ ಪ್ರತಿಕ್ರಿಯಿಸಿ, ‘ದೂರುದಾರ ಮಹಿಳೆ ಹೊಟ್ಟೆ ನೋವಿನಿಂದ ಜು. 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿದ್ದ ಭ್ರೂಣ ಸತ್ತು ಹೋಗಿರುವುದು ಗೊತ್ತಾಗಿತ್ತು. ತಕ್ಷಣವೇ ಭ್ರೂಣ ಹೊರಬರುವಂತೆ ಮಾಡಲಾಗಿದೆ. ಮಹಿಳೆ ಮಾಡಿರುವ ಆಧಾರರಹಿತ ಆರೋಪಗಳ ವಿರುದ್ಧ ಕಾನೂನು ಕ್ರಮಕ್ಕೆ ನಿರ್ಧರಿಸಿದ್ದೇವೆ’ ಎಂದೂ ತಿಳಿಸಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು