ಬುಧವಾರ, ಜೂನ್ 23, 2021
30 °C
ಏಷ್ಯಾ–ಪೆಸಿಫಿಕ್‌ ಮುಕ್ತ ವ್ಯಾಪಾರ: ಕೇಂದ್ರಕ್ಕೆ ಅಧ್ಯಕ್ಷರ ಪತ್ರ

ವಿದೇಶಿ ಹಾಲು ಕೆಎಂಎಫ್‌ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈನು ಉತ್ಪನ್ನವನ್ನು ಏಷ್ಯಾ–ಪೆಸಿಫಿಕ್‌ ರಾಷ್ಟ್ರಗಳ ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಕರ್ನಾಟಕ ಹಾಲು ಮಹಾಒಕ್ಕೂಟ (ಕೆಎಂಎಫ್‌) ಮತ್ತು ಗುಜರಾತ್‌ನ ಅಮುಲ್‌ ಸಂಘಟನೆಗಳು ಪ್ರಬಲ ವಿರೋಧ ವ್ಯಕ್ತಪಡಿಸಿವೆ.

ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಎಲ್‌.ಜಾರಕಿಹೊಳಿ ಅವರು ಈ ಸಂಬಂಧ ಕೇಂದ್ರದ ವಾಣಿಜ್ಯ ಮತ್ತು ಕೈಗಾ
ರಿಕಾ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದು, ನ್ಯೂಜಿಲೆಂಡ್‌, ಆಸ್ಟ್ರೇಲಿಯಾಗಳಿಂದ ಹಾಲು ದೇಶಕ್ಕೆ ಬರುವಂತಾದರೆ ನಮ್ಮ ಹೈನುಗಾರರ ಅವಸಾನ ನಿಶ್ಚಿತ ಎಂದು ಹೇಳಿದ್ದಾರೆ.

‘ಕೆಲವೇ ವರ್ಷಗಳಲ್ಲಿ ದೇಶೀಯ ಹಾಲು ಉತ್ಪಾದನೆಯು ಬೇಡಿಕೆಗಿಂತ ಅಧಿಕವಾಗಲಿದೆ. ಹೀಗಿರುವಾಗ ವಿದೇಶಿ ಹಾಲು ತರಿಸಿಕೊಳ್ಳುವ ಅಗತ್ಯ ಇಲ್ಲ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಕೇಂದ್ರದ ಮೇಲೆ ಒತ್ತಡ ಹಾಕಬೇಕೆಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇನೆ’ ಎಂದು ಬಾಲಚಂದ್ರ ಜಾರಕಿಹೊಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು