ಶನಿವಾರ, ಅಕ್ಟೋಬರ್ 19, 2019
27 °C

ವಿದೇಶಿ ಹಾಲು ಬೇಡ: ಪ್ರಭು ಚವ್ಹಾಣ್‌ ಪತ್ರ

Published:
Updated:

ಬೆಂಗಳೂರು: ಬ್ಯಾಂಕಾಕ್‌ನಲ್ಲಿ ಈಚೆಗೆ ನಡೆದ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಹಾಲಿನ ಉತ್ಪನ್ನಗಳನ್ನು ಸೇರಿಸಿದ್ದೇ ಆದರೆ ಭಾರತೀಯ ಹೈನೋದ್ಯಮಕ್ಕೆ ಭಾರಿ ಅಪಾಯ ಇದೆ. ಹೀಗಾಗಿ ಒಪ್ಪಂದದಿಂದ ಇದನ್ನು ಹೊರಗಿಡಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್‌ ಒತ್ತಾಯಿಸಿದ್ದಾರೆ.

ಈ ಸಂಬಂಧ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಪತ್ರ ಬರೆದಿರುವ ಅವರು, ಮುಕ್ತ ವ್ಯಾಪಾರ ಜಾರಿಗೆ ಬಂದರೆ ನ್ಯೂಜಿಲೆಂಡ್‌, ಆಸ್ಟ್ರೇಲಿಯಾದಂತಹ ದೇಶಗಳಿಂದ ಅಗ್ಗದ ದರದ ಹಾಲು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಇದರಿಂದ ದೇಶದ ಹೈನೋದ್ಯಮ ಅವಸಾನಕ್ಕೆ ಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Post Comments (+)