ಬೆಂಗಳೂರು: ವೇಗ ಹಾಗೂ ಒತ್ತಡದ ಬದುಕಿನಲ್ಲಿ ಮನುಷ್ಯರಿಗೆ ಹಠಾತ್ ಆಘಾತಗಳು ಹೆಚ್ಚಾಗುತ್ತಿವೆ. ಸೇವಾ ಮನೋಭಾವದ ಟ್ರಾಮಾ ಚಿಕಿತ್ಸಾ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾದರೆ, ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗುವುದರಿಂದ ಜೀವಗಳು ಉಳಿಯಲು ಸಾಧ್ಯವಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ತಿಳಿಸಿದರು.

ಜಯನಗರ 1ನೇ ಬ್ಲಾಕ್ ನಲ್ಲಿರುವ ಮಹಾಬೋಧಿ ಮಿದುಳು ಆಸ್ಪತ್ರೆಯಲ್ಲಿ ಹೊಸ ಟ್ರಾಮಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ್ಞಾನ, ಪ್ರೀತಿ ಹಾಗೂ ಕರುಣೆಯ ಬುದ್ಧನ ತತ್ವಗಳನ್ನುಅಳವಡಿಸಿಕೊಂಡು ಮಹಾಬೋಧಿ ಆಸ್ಪತ್ರೆಯು ಸೇವಾ ನಿರತವಾಗಿದೆ ಎಂದು ಶ್ಲಾಘಿಸಿದರು.

ನರಶಸ್ತ್ರ ಚಿಕಿತ್ಸಕ ಡಾ.ಎನ್.ಕೆ. ವೆಂಕಟರಮಣ ಮಾತನಾಡಿ, ‘ಮನಸ್ಸು ಮತ್ತು ಮಿದುಳು ಸರಿಯಾಗಿದ್ದರೆ ಇಡೀ ಸಮಾಜವು ಆರೋಗ್ಯ ಹಾಗೂ ನೆಮ್ಮದಿಯಿಂದ ಇರುತ್ತದೆ. ಇದು ಬುದ್ಧನ ತತ್ವವೂ ಆಗಿದೆ’ ಎಂದರು.

ಆಸ್ಪತ್ರೆಯ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಬುದ್ಧನ ವಿಗ್ರಹವನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು.

ಮಹಾಬೋಧಿ ಸೊಸೈಟಿಯ ಆಚಾರ್ಯ ಬುದ್ಧ ರಕ್ಷಿತ, ಕಸ್ಸಪ ಮಹಾಥೇರ, ಆನಂದ ಭಂತೇಜಿ, ಶ್ರೀರಾಮ್ ರೂಪನಗುಂಟ, ನರ ಶಸ್ತ್ರಚಿಕಿತ್ಸಕ ಡಾ.ಜಿ. ನಾರಾಯಣ ರೆಡ್ಡಿ, ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.