ಸೋಮವಾರ, ನವೆಂಬರ್ 18, 2019
24 °C

ಫುಟ್‌ಬಾಲ್ ಗಾತ್ರದ ಗಡ್ಡೆ; ಯಶಸ್ವಿ ಶಸ್ತ್ರಚಿಕಿತ್ಸೆ

Published:
Updated:
Prajavani

ಬೆಂಗಳೂರು: ಹಿಂದೂಪುರದ 63ವರ್ಷದ ಮಹಿಳೆಯ ಎಡ ಅಂಡಾಶಯದಲ್ಲಿ ಬೆಳೆದಿದ್ದ ಫುಟ್‌ಬಾಲ್ ಗಾತ್ರದ ಅಂಡಾಶಯದ ನಾರುಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. 

60 ದಿನಗಳಲ್ಲಿ 25X25 ಸೆಂ.ಮೀ. ದೊಡ್ಡದಾಗಿ ಗಡ್ಡೆ ಬೆಳೆದಿತ್ತು. ಈ ಬಗ್ಗೆ ತಪಾಸಣೆ ನಡೆಸಿದ ತಜ್ಞ ವೈದ್ಯರ ತಂಡವು ಅಂಡಾಶಯದ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ವೈದ್ಯರಾದ ಡಾ.ಸಂದೀಪ್ ನಾಯಕ್ ಮತ್ತು ಡಾ.ಶ್ರೀಕಾಂತ್ ರೆಡ್ಡಿ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ.

ಪ್ರತಿಕ್ರಿಯಿಸಿ (+)