ಕ್ಯಾನ್ಸರ್ ಔಷಧಿ ನೀಡುವುದಾಗಿ ₹36 ಲಕ್ಷ ವಂಚನೆ
ಬೆಂಗಳೂರು: ಕ್ಯಾನ್ಸರ್‌ಗೆ ಚಿಕಿತ್ಸೆಗೆ ಬಳಸುವ ಗಿಡ ಮೂಲಿಕೆಯೊಂದರ ಔಷಧ ನೀಡುವುದಾಗಿ ಉದ್ಯಮಿಯೊಬ್ಬರಿಂದ ₹36.75 ಲಕ್ಷ ಪಡೆದು, ವಂಚಿಸಿರುವ ಪ್ರಕರಣ ನಡೆದಿದೆ.
ಪಟ್ಟಣಗೆರೆ ಉದ್ಯಮಿ ರಾಹುಲ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಮೋಹನ್ ಕುಮಾರ್ ಎಂಬಾತನ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ರಾಹುಲ್ ಸಂಬಂಧಿಯೊಬ್ಬರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಸ್ನೇಹಿತರೊಬ್ಬರ ಮೂಲಕ ಕಳೆದ ವರ್ಷ ಮೋಹನ್ ಪರಿಚಯವಾಗಿದ್ದ. ತಾನು ಕೃಷಿಕ, ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಬೇರನ್ನು ಕಸಿ ಮಾಡಿ ಕೊಡುತ್ತೇನೆ ಎಂದು ನಂಬಿಸಿದ್ದ ಆರೋಪಿ, ಔಷಧಕ್ಕೆ ಹಣ ಖರ್ಚಾಗುತ್ತದೆ ಎಂದು ಹಂತ ಹಂತವಾಗಿ ಒಟ್ಟು ₹36.75 ಲಕ್ಷ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ’.
‘ಬಳಿಕ ಔಷಧವೂ ನೀಡದೆ, ಮೋಹನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ವಿಚಾರಿಸಲು ಹೋದಾಗ ಆತ ಮನೆ ಖಾಲಿ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ವಂಚನೆಗೆ ಒಳಗಾಗಿರುವ ವಿಚಾರ ತಿಳಿದು, ವಂಚಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.