ಭಾನುವಾರ, ಜನವರಿ 26, 2020
18 °C

ಕೆನರಾ: ಉಚಿತ ಕಂಪ್ಯೂಟರ್ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‌ಕೆನರಾ ಬ್ಯಾಂಕ್ ಮಾಹಿತಿ ತಂತ್ರ ಜ್ಞಾನ ತರಬೇತಿ ಸಂಸ್ಥೆ ವತಿಯಿಂದ ನಿರುದ್ಯೋಗಿಗಳಿಗೆ 3 ತಿಂಗಳ ಉಚಿತ ಕಂಪ್ಯೂಟರ್‌ ತರಬೇತಿ ನೀಡಲಾಗುವುದು. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ 18ರಿಂದ 27 ವರ್ಷದೊಳಗಿನವರು ತರಬೇತಿಯಲ್ಲಿ ಭಾಗವಹಿಸಬಹುದು. ಜ. 1ರಿಂದ ತರಬೇತಿ ಆರಂಭವಾಗಲಿದೆ. ಆಸಕ್ತರು ಡಿ.9ರಿಂದ 13ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ವಿಳಾಸ: ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, ಮಲ್ಲೇಶ್ವರ. ಸಂಪರ್ಕ: 94485 38107

ರಂಗ ತರಬೇತಿ

ಕರ್ನಾಟಕ ನಾಟಕ ಅಕಾಡೆಮಿ ವತಿ ಯಿಂದ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಸತಿ ಸಹಿತ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

18ರಿಂದ 40 ವರ್ಷದೊಳಗಿನವರು ಕಚೇರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿ. 10 ಕೊನೆಯ ದಿನ. ವಿಳಾಸ: ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ.

ದೂರವಾಣಿ ಸಂಖ್ಯೆ:080–22237484

 

ಪ್ರತಿಕ್ರಿಯಿಸಿ (+)