ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟಗಾರ ಸಿ.ಎಚ್. ಜಾಕೋಬ್ ಲೋಬೊ ನಿಧನ

Last Updated 14 ಸೆಪ್ಟೆಂಬರ್ 2020, 20:06 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ನಿವೃತ್ತ ಸರ್ಕಾರಿ ಅಧಿಕಾರಿ ಸಿ.ಎಚ್. ಜಾಕೋಬ್ ಲೋಬೊ (90) ಸೋಮವಾರ ನಿಧನರಾದರು.

ಜಾಕೋಬ್ ಅವರಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ವಾಯುದಳದಲ್ಲಿ ಸೇವೆ ಸಲ್ಲಿಸಿದ್ದ ಜಾಕೋಬ್, ಕೆಎಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಎರಡು ಸಲ ಕನ್ನಡ ಕ್ರೈಸ್ತ ಸಾಹಿತಿಗಳ ಶಿಬಿರ ಸಂಘಟಿಸಿದ್ದರು.

ಜಿ.ಎಸ್.ಲೋಖಂಡೆ ಬರೆದಿದ್ದ ‘ಭೀಮರಾವ್ ರಾಮ್ ಜಿ ಅಂಬೇಡ್ಕರ್– ಸಾಮಾಜಿಕ ಪ್ರಜಾಪ್ರಭುತ್ವದ ಒಂದು ಅಧ್ಯಯನ’ ಪುಸ್ತಕವನ್ನು ಜಾಕೋಬ್ ಅವರು ಕನ್ನಡಕ್ಕೆ ಅನುವಾದಿಸಿದ್ದರು. ಕನ್ನಡ ಕ್ರೈಸ್ತ ಚಳವಳಿಗೆ ಬೆಂಬಲಿಗರಾಗಿದ್ದ ಜಾಕೋಬ್ ಎಂ.ಆರ್. ಅಂತೋಣಿಸ್ವಾಮಿ, ಮಂಡಿ ಇನ್ನಾಸಪ್ಪ ಹಾಗೂ ಸಿ. ಮರಿ ಜೋಸೆಫ್ ಅವರ ಆಪ್ತ ಒಡನಾಟದಲ್ಲಿ ಹಲವು ಕಾರ್ಯಕ್ರಮ ರೂಪಿಸಿದ್ದರು. ಹೊಸೂರು ರಸ್ತೆಯ ಸಂತ ಪ್ಯಾಟ್ರಿಕ್ಕರ್ ಸಮಾಧಿ ಭೂಮಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT