ಬೆಂಗಳೂರು: ಪೊಲೀಸ್ ಸಮವಸ್ತ್ರದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಮನೆಗೆ ನುಗ್ಗಿ ₹20 ಲಕ್ಷ ನಗದು ಮತ್ತು ಚಿನ್ನದ ಅಭರಣ ದೋಚಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ಟ್ಯಾಂಪ್ ವೆಂಡರ್ ಬೆಟ್ಟೇಗೌಡ (52) ಬಂಧಿತ.

ಬಿ.ಇ.ಎಲ್ ಲೇಔಟ್ನಲ್ಲಿ ನೆಲಸಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಹೊಂಬಾಳೇಗೌಡ ಅವರ ಮನೆಗೆ ಫೆಬ್ರುವರಿ 16ರಂದು ಮಧ್ಯಾಹ್ನ ಪೊಲೀಸರ ಸೋಗಿನಲ್ಲಿ ಇಬ್ಬರು ಆರೋಪಿಗಳು ನುಗ್ಗಿ, ಗನ್ ಮತ್ತು ಚಾಕು ತೋರಿಸಿ ಮನೆಯಲ್ಲಿದ್ದವರನ್ನು ಬೆದರಿಸಿದ್ದರು. ಬಳಿಕ, ಹೊಂಬಾಳೇಗೌಡ ದಂಪತಿಯ ಕೈ–ಕಾಲುಗಳಿಗೆ ಟೇಪ್ ಸುತ್ತಿ, ಬೆಡ್ ರೂಮ್ನಲ್ಲಿದ್ದ ₹20 ಲಕ್ಷ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿ ಆಗಿದ್ದರು. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದರೋಡೆಕೋರರು ದಂಪತಿಯ ಮೊಬೈಲ್ ಫೋನ್ ಕಸಿದುಕೊಂಡಿದ್ದರು. ಅಲ್ಲದೇ, ಸಾಕ್ಷ್ಯ ನಾಶಪಡಿಸಲು ಮನೆಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದ ಡಿವಿಆರ್ ತೆಗೆದುಕೊಂಡು ಪರಾರಿ ಆಗಿದ್ದರು ಎಂದು ಮೂಲಗಳು ಹೇಳಿವೆ.

ಪ್ರಕರಣದ ತನಿಖೆ ನಡೆಸಿದ್ದ ಬ್ಯಾಡರಹಳ್ಳಿ ಪೊಲೀಸರು, ನಾಗೇಂದ್ರ ಹಾಗೂ ಬಚ್ಚನ್ ಎಂಬುವರನ್ನು ಆರಂಭದಲ್ಲಿ ಬಂಧಿಸಿದ್ದರು. ಆದರೆ, ತನಿಖೆ ಮುಂದುವರಿಸಿದಾಗ ಅಸಲಿ ಸತ್ಯ ಬಯಲಾಗಿದ್ದು, ಹೊಂಬಾಳೇಗೌಡ ಅವರ ಸ್ನೇಹಿತ ಬೆಟ್ಟೇಗೌಡ ಅವರ ಸಂಚು ಬಯಲಾಗಿದೆ.

ಹೊಂಬಾಳೇಗೌಡ ಅವರು ನಿವೇಶನ ಮಾರಾಟಕ್ಕೆ ಬೆಟ್ಟೇಗೌಡ ಅವರ ಬಳಿ ಸ್ಟ್ಯಾಂಪ್ ಪೇಪರ್ ಮಾಡಿಸಿದ್ದರು. ಹೀಗಾಗಿ, ಸ್ನೇಹಿತನ ಬಳಿ ನಿವೇಶನ ಮಾರಾಟ ಮಾಡಿದ ಹಣ ಇದೆ ಎಂದು ಆರೋಪಿ ತಿಳಿದುಕೊಂಡಿದ್ದರು. ದರೋಡೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.

ಜೈಲಿಂದ ಬಂದು ಕೃತ್ಯ: ಆರೋಪಿ ನಾಗೇಂದ್ರ ಪರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ದರೋಡೆ ನಡೆಸುವಂತೆ ನಾಗೇಂದ್ರ ಅವರಿಗೆ ಬೆಟ್ಟೇಗೌಡ ತಿಳಿಸಿದ್ದರು. ಶಿವಾಜಿನಗರದಲ್ಲಿ ಶೂಟಿಂಗ್ಗೆಂದು ಪೊಲೀಸ್ ಸಮವಸ್ತ್ರವನ್ನು ಬಾಡಿಗೆಗೆ ಪಡೆದಿದ್ದ ನಾಗೇಂದ್ರ, ಅದೇ ಸಮವಸ್ತ್ರ ಧರಿಸಿ ಸಹಚರನೊಂದಿಗೆ ಹೊಂಬಾಳೇಗೌಡ ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದರು.

ಪ್ರಕರಣ ದಾಖಲಾದ ಮೇಲೆ ಸುಕೊ (ಸೀನ್ ಆಫ್ ಕ್ರೈಂ) ತಂಡ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ಪರೀಕ್ಷೆ ಮಾಡಿದಾಗ, ಅದು ಈಗಾಗಲೇ ಜೈಲಿನಲ್ಲಿ ಇರುವ ಒಬ್ಬ ಕೈದಿಯ ಬೆರಳಚ್ಚಿಗೆ ಹೋಲಿಕೆ ಆಗುತ್ತಿತ್ತು. ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರಂಟ್ ಮೇಲೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಯಿತು. ಬೆಟ್ಟೇಗೌಡ ಅವರು ದರೋಡೆ ನಡೆಸಲು ಸೂಚಿಸಿದ್ದರು ಎಂಬುದಾಗಿ ವಿಚಾರಣೆ ವೇಳೆ ನಾಗೇಂದ್ರ ತಪ್ಪೊಪ್ಪಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.