ಬೆಂಗಳೂರು: ಕೋಣನಕುಂಟೆಯ ವಡ್ಡರ ಪಾಳ್ಯದಲ್ಲಿ ಪಾರ್ಟಿ ವೇಳೆ ಸ್ನೇಹಿತನಿಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ ಆರೋಪಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಕೋಣನಕುಂಟೆಯ ಗಿರಿವರ್ಧನ್ ಬಂಧಿತ ಆರೋಪಿ. ಹಲ್ಲೆಗೆ ಒಳಗಾದ ರಾಹುಲ್ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಏಪ್ರಿಲ್ 1ರಂದು ಆರೋಪಿ ಗಿರಿವರ್ಧನ್ ನಿವಾಸದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ರಾಹುಲ್, ದಿಲೀಪ್, ಸ್ಕಂದ, ಕಾರ್ತಿಕ್ ಅವರು ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಮದ್ಯಪಾನ ಮಾಡುತ್ತಿದ್ದಾಗ ರಾಹುಲ್ ಮತ್ತು ಗಿರಿವರ್ಧನ್ ನಡುವೆ ಮಾತಿನ ಚಕಮಕಿ ನಡೆದಿತ್ತು.

ಜಗಳ ತಾರಕ್ಕೆ ಹೋಗಿ, ಗಿರಿವರ್ಧನ್ ಕಾರಿನಿಂದ ಚಾಕು ತಂದು ರಾಹುಲ್ ಅವರ ಎದೆಗೆ ಇರಿದಿದ್ದ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಹುಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು, ಆರೋಪಿ ಗಿರಿವರ್ಧನ್ನನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.