ಸ್ನೇಹಿತರ ದಿನದ ಆಚರಣೆಗೆ ಸಿದ್ಧವಾಗಿದೆ ನಗರ

7

ಸ್ನೇಹಿತರ ದಿನದ ಆಚರಣೆಗೆ ಸಿದ್ಧವಾಗಿದೆ ನಗರ

Published:
Updated:

ಬೆಂಗಳೂರು: ಆಗಸ್ಟ್‌ ತಿಂಗಳ ಮೊದಲ ಭಾನುವಾರವನ್ನು ಅಂತರರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ನಗರದಲ್ಲಿಯೂ ಈ ಸಂಭ್ರಮ ಮನೆ ಮಾಡಿದೆ.

ಭಿನ್ನವಾದ ಬ್ಯಾಂಡ್‌ಗಳನ್ನು ಖರೀದಿಸಿ, ಅದನ್ನು ತಮ್ಮ ನೆಚ್ಚಿನ ಸ್ನೇಹಿತರಿಗೆ ಕಟ್ಟುವ ಸಂಭ್ರಮದಲ್ಲಿ ಯುವ ಮನಸ್ಸುಗಳಿವೆ. ಸ್ನೇಹದ ಬ್ಯಾಂಡ್‌ಗಳ ಖರೀದಿ ಭರಾಟೆ ಜೋರಾಗಿದೆ. ಸ್ಯಾಟಿನ್‌ ರಿಬ್ಬನ್‌ಗಳಿಂದ ಹಿಡಿದು ದುಬಾರಿ ಬೆಲೆ ಬ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಈ ದಿನಕ್ಕಾಗಿಯೇ ಗ್ರೀಟಿಂಗ್‌, ಹೂವು, ಗಿಫ್ಟ್‌... ಹೀಗೆ ಹಲವು ರೀತಿಯ ಉಡುಗೊರೆಗಳು ದೊರೆಯುತ್ತಿವೆ. ಟ್ವಿಟರ್‌, ಫೇಸ್‌ಬುಕ್‌ ಸೇರಿ ವಿವಿಧ ಜಾಲತಾಣಗಳಲ್ಲಿಯೂ ಶುಭಾಶಯ ವಿನಿಮಯ ಈಗಾಗಲೇ ಪ್ರಾರಂಭವಾಗಿದೆ. 

ಮಾಲ್‌ಗಳಲ್ಲೂ ಆಚರಣೆ: ನಗರದ ಮಾಲ್‌ಗಳಲ್ಲೂ ಸ್ನೇಹಿತರ ದಿನಾಚರಣೆಗಾಗಿ ನಾನಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಬಗೆಬಗೆ ಆಟಗಳು, ಶಾಪಿಂಗ್‌ ಸೆಂಟರ್‌ಗಳಲ್ಲಿ ಆಫರ್‌ಗಳು, ಹೋಟೆಲ್‌ಗಳಲ್ಲಿಯೂ ವಿಶೇಷ ಮೆನು ಸಹ ಸಿದ್ಧವಾಗಿದೆ. 

ಶನಿವಾರ ಹಾಗೂ ಭಾನುವಾರ ಸಾಕಷ್ಟು ಹೋಟೆಲ್‌, ಪಬ್‌ಗಳು ಪಾರ್ಟಿಗಳನ್ನು ಆಯೋಜಿಸಿದ್ದು, ಡ್ರೆಸ್‌ಕೋಡ್‌ ಕೂಡ ಮಾಡಿವೆ. ಥೀಮ್‌ ಹಾಗೂ ಕಾನ್ಸೆಪ್ಟ್‌ ಇರುವ ಫ್ರೆಂಡ್‌ಶಿಪ್‌ ಪಾರ್ಟಿಗಳು ನಡೆಯುತ್ತಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !