ಬೆಂಗಳೂರು: ಲೋಕ ಕಲ್ಯಾಣಾರ್ಥವಾಗಿ ಅಖಿಲ ಭಾರತ ಮಹಾ ಕುಬೇರ ಸಂಪೂರ್ಣ ಯಾಗವನ್ನು ಶಿವಶ್ರೀ ಮೀಡಿಯಾ ಪ್ರೈ.ಲಿ. ಅಖಿಲ ಭಾರತ ಮಹಾ ಕುಬೇರ ಸಂಪೂರ್ಣ ಯಾಗ ಸಮಿತಿ ಮತ್ತು ತಸ್ಮೈ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿ ಅಂಗಳದಲ್ಲಿ ಸೆ.11ರಿಂದ 21ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಪ್ರಥಮ ಕುಂಡ ಸೇರಿ 11 ಪ್ರಮುಖ ಯಾಗ ಕುಂಡಗಳು, 97 ಇತರ ಹೋಮಕುಂಡಗಳಲ್ಲಿ ಯಾಗ ನಡೆಯಲಿದೆ. ಕುಬೇರ ಯಾಗದ ಮುಖ್ಯಸ್ಥರಾಗಿ ಬ್ರಹ್ಮಶ್ರೀ ರಂಗಂ ಸರನ್ಮೋಹನನ್ ತಂತ್ರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ನವಗ್ರಹ ಪೂಜೆ, ಮಹಾವಿಷ್ಣು ಪೂಜೆ, ಲಕ್ಷ್ಮೀ ಕುಬೇರ ಪೂಜೆ, ಸರ ಐಶ್ವರ್ಯ ಪೂಜೆ, ಅಷ್ಟಲಕ್ಷ್ಮೀ ಪೂಜೆ, ಧನಲಕ್ಷ್ಮೀ ಪೂಜೆ, ವಿನಾಯಕ ಪೂಜೆ, ಕಲಶಾಭಿಷೇಕ, ಅಷ್ಟಾಭಿಷೇಕ, ಶಂಖಾಭಿಷೇಕ, ಪುಷ್ಪಾಭಿಷೇಕ, ನವಾಭಿಷೇಕ, ಶಾಂತ ಕುಂಭ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಮಹಾ ನೈವೇದ್ಯ, ಮಹಾ ಮಂಗಳಾರತಿ, ಮಹಾ ಗುರು ನಂದನಾ ಪೂಜೆ ನಡೆಯಲಿವೆ. ನಿತ್ಯ ಅನ್ನ ದಾಸೋಹ ಆಯೋಜನೆ ಮಾಡಲಾಗಿದೆ.
‘ಪ್ಲಾಟಿನಂ ಸೇವೆ, ಗೋಲ್ಡನ್, ಡೈಮಂಡ್, ಸಿಲ್ವರ್, ಬ್ರಾಂಜ್, ರಾಶಿ ಸಂಕಲ್ಪ ಸೇವೆ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ವಿವಿಧ ರಾಜ್ಯಗಳಿಂದ ದಾರ್ಶನಿಕರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು, ಉದ್ಯಮಿಗಳು ಈ ಮಹಾ ಕುಬೇರ ಯಾಗದಲ್ಲಿ ಭಾಗವಹಿಸುವರು’ ಎಂದು ಪ್ರಕಟಣೆ ತಿಳಿಸಿದೆ.
ಯಾಗಕ್ಕೆ ಬರುವ ಭಕ್ತರು ಈಗಾಗಲೇ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಮಾಹಿತಿಗಾಗಿ 9480390450, 8951546098 ಸಂಪರ್ಕಿಸಬಹುದು ಎಂದು ಅಖಿಲ ಭಾರತ ಸಂಪೂರ್ಣ ಮಹಾ ಕುಬೇರ ಸಂಪೂರ್ಣ ಯಾಗ ಸಮಿತಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.