ಬೆಂಗಳೂರು: ಇಂಧನ ದರ ಏರಿಕೆಯು ಗಿಗ್ ಕಾರ್ಮಿಕರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ. ಎಲ್ಪಿಜಿ ಸಿಲಿಂಡರ್ ದರ ಏರಿಕೆಯಾಗಿ ಆನ್ಲೈನ್ ಪ್ಲ್ಯಾಟ್ಫಾರ್ಮ್ ಬಳಸಿ ಆಹಾರ ತರಿಸುವವರ ಪ್ರಮಾಣ ಒಂದೆಡೆ ಕಡಿಮೆಯಾಗಿದ್ದರೆ, ಪೆಟ್ರೊಲ್ ದರ ಹೆಚ್ಚಳವಾಗಿ ಪೂರೈಕೆ ವೆಚ್ಚ ಅಧಿಕಗೊಂಡಿದೆ.

ಎಲ್ಪಿಜಿ ಸಿಲಿಂಡರ್ ಸಮಸ್ಯೆ ತಲೆದೋರಿದಾಗ ಹೋಟೆಲ್, ರೆಸ್ಟೊರೆಂಟ್ಗಳಲ್ಲಿ ಆಹಾರದ ದರವನ್ನು ಏರಿಕೆ ಮಾಡಿದರು. ಗ್ರಾಹಕರು ಅಗತ್ಯ ಬಿದ್ದಾಗ ನೇರವಾಗಿ ಹೋಟೆಲ್ಗಳಿಗೆ ಹೋಗುವುದಕ್ಕೆ ಆದ್ಯತೆ ನೀಡುತ್ತಿದ್ದು, ಆನ್ಲೈನ್ ವಿತರಣಾ ಪ್ಲ್ಯಾಟ್ಫಾರ್ಮ್ ಬಳಸುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಪೂರೈಕೆಯ ವೆಚ್ಚವು ಗ್ರಾಹಕರಿಗೆ ಉಳಿಯುತ್ತಿದೆ. ಆದರೆ, ವಿತರಣಾ ವ್ಯವಸ್ಥೆಯನ್ನೇ ನಂಬಿರುವ ಗಿಗ್ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿತರಣಾ ಏಜೆಂಟ್ಗಳು ತಿಳಿಸಿದ್ದಾರೆ.

‘ಮೊದಲು ದಿನಕ್ಕೆ 20ರಿಂದ 25 ಆರ್ಡರ್ಗಳು ಬರುತ್ತಿದ್ದವು. ನಾಲ್ಕೈದು ವಾರಗಳ ಈಚೆಗೆ 15ರಿಂದ 20 ಆರ್ಡರ್ಗಳಷ್ಟೇ ಬರುತ್ತಿವೆ. ಇದೀಗ ಪೆಟ್ರೊಲ್ ದರವೂ ಹೆಚ್ಚಳವಾಗಿರುವುದರಿಂದ ಖರ್ಚು ಅಧಿಕಗೊಂಡಿದ್ದು, ಆದಾಯ ಕಡಿಮೆಯಾಗಿದೆ’ ಎಂದು ಗಿಗ್ ಕಾರ್ಮಿಕ ಮುಜಾಕಿರ್ ತಿಳಿಸಿದರು.

‘ವೆಚ್ಚ ಹೆಚ್ಚಾಗಿದ್ದರೂ ನಮಗೆ ಸಿಗುವ ಕಮಿಷನ್ ಹೆಚ್ಚಾಗಿಲ್ಲ. ನಮಗೆ ಏನು ಪರಿಹಾರ ಎಂಬುದನ್ನು ವಿತರಣಾ ಅಗ್ರಿಗೇಟರ್ ಸಂಸ್ಥೆಗಳು ತಿಳಿಸಿಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಿದೆ’ ಎಂದು ಗಿಗ್ ಕಾರ್ಮಿಕ ತರುಣ್ ಕುಮಾರ್ ಹೇಳಿದರು.

‘ದೊಡ್ಡ ಪ್ರಮಾಣದ ರೆಸ್ಟೊರೆಂಟ್ಗಳಿಂದ ತರಿಸಿಕೊಳ್ಳುವವರ ಪ್ರಮಾಣ ಕಡಿಮೆಯಾಗಿಲ್ಲ. ರಾತ್ರಿ ವಿತರಣೆಗಳು ಹಾಗೇ ಉಳಿದಿರುವುದರಿಂದ ಗಿಗ್ ಕಾರ್ಮಿಕರು ಉಸಿರಾಡುವಂತಾಗಿದೆ’ ಎಂದು ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್ನರ್ಸ್ ಯೂನಿಯನ್ ಅಧ್ಯಕ್ಷ ವಿನಯ್ ಸಾರಥಿ ತಿಳಿಸಿದರು.

‘ಮೊದಲೇ ಕಡಿಮೆ ಆದಾಯ ಗಳಿಸುತ್ತಿದ್ದ ಗಿಗ್ ಕಾರ್ಮಿಕರಿಗೆ ಇಂಧನ ಬೆಲೆ ಏರಿಕೆ ಹೊಡೆತ ನೀಡಿದೆ. ಇಂಧನ ವೆಚ್ಚವನ್ನು ಸರಿದೂಗಿಸಲು ಅಗ್ರಿಗೇಟರ್ ಕಂಪನಿಗಳು ನೆರವಿಗೆ ಬರುತ್ತಿಲ್ಲ. ಅದೂ ಈ ಕಾರ್ಮಿಕರ ಜೇಬಿನಿಂದ ಭರಿಸಬೇಕಿದ್ದರೆ ಅವರ ಜೀವನ ಸಾಗುವುದು ಕಷ್ಟ. ಗಿಗ್ ಕಾರ್ಮಿಕರ ನೆರವಿಗೆ ಸರ್ಕಾರ ಬರಬೇಕು. ಪರಿಹಾರ, ರಿಯಾಯಿತಿಗಳನ್ನು ನೀಡಲು ಪರಿಶೀಲಿಸಬೇಕು’ ಎಂದು ಕರ್ನಾಟಕ ಆ್ಯಪ್ ಆಧಾರಿತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಮತ್ತು ಭಾರತೀಯ ಆ್ಯಪ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಇನಾಯತ್ ಅಲಿ ಒತ್ತಾಯಿಸಿದರು.

ದರ ಹೆಚ್ಚಳ: ಗ್ರಾಹಕರಿಗೆ ಆಘಾತ

ತಮ್ಮ ವಾಹನಗಳಿಗೆ ಇಂಧನ ತುಂಬಿಸಲು ಶುಕ್ರವಾರ ಬೆಳಿಗ್ಗೆ ಬಂಕ್ಗಳಿಗೆ ಬಂದಿದ್ದ ಗ್ರಾಹಕರು ಡೀಸೆಲ್, ಪೆಟ್ರೋಲ್ ದರ ಏರಿಕೆಯಾಗಿರುವುದನ್ನು ಕಂಡು ಆಘಾತಗೊಂಡರು.

ಡೀಸೆಲ್ ದರವು ಲೀಟರ್ಗೆ ₹ 94.10, ಪೆಟ್ರೋಲ್ ದರವು ₹ 106.10ಕ್ಕೆ ತಲುಪಿತ್ತು. ರಾಜಾಜಿನಗರ, ಜಯನಗರ ಮತ್ತು ಸುತ್ತಮುತ್ತಲಿನ ಹಲವಾರು ಪೆಟ್ರೋಲ್ ಬಂಕ್ಗಳಲ್ಲಿ ಸಿಬ್ಬಂದಿ ದರದ ಪ್ರದರ್ಶನಗಳನ್ನು ಬದಲಾಯಿಸಿದಾಗ ಪ್ರಯಾಣಿಕರು ಹತಾಶೆ ವ್ಯಕ್ತಪಡಿಸಿದರು.

‘ನಾನು ಮೊದಲು ₹ 200ಕ್ಕೆ ಪೆಟ್ರೋಲ್ ಹಾಕಿಸಿದಾಗ ಎಷ್ಟು ದೂರ ಸಂಚರಿಸಲು ಸಾಧ್ಯವಿತ್ತೋ ಅಷ್ಟು ದೂರಕ್ಕೆ ಸಂಚರಿಸಲು ಇನ್ನು ಮುಂದೆ ₹220ಕ್ಕೆ ಪೆಟ್ರೋಲ್ ಹಾಕಿಸಬೇಕಾಗುತ್ತದೆ’ ಎಂದು ದ್ವಿಚಕ್ರ ವಾಹನ ಸವಾರ ಕಿರಣ್ ಹೇಳಿದರು.

‘ಡೀಸೆಲ್, ಪೆಟ್ರೋಲ್ ದರ ಹೆಚ್ಚಳವಾದಾಗ ಅದೇ ಪ್ರಮಾಣದಲ್ಲಿ ಆಹಾರ ಪದಾರ್ಥಗಳಿಂದ ಹಿಡಿದು ಸಾರಿಗೆ ದರಗಳವರೆಗೆ ದರ ಹೆಚ್ಚಳವಾಗುತ್ತದೆ. ಆದರೆ, ನಮ್ಮ ವೇತನವು ಅದಕ್ಕೆ ಅನುಗುಣವಾಗಿ ಹೆಚ್ಚಳವಾಗುವುದೇ ಇಲ್ಲ’ ಎಂದು ಇನ್ನೊಬ್ಬ ಗ್ರಾಹಕರು ಪ್ರತಿಕ್ರಿಯಿಸಿದರು.

‘ಮೆಟ್ರೊ ಪ್ರಯಾಣ ಈಗಾಗಲೇ ದುಬಾರಿಯಾಗಿದೆ. ಈಗ ಪೆಟ್ರೋಲ್ ದರವೂ ಹೆಚ್ಚಳವಾದರೆ ಇನ್ನು ಮುಂದೆ ವಿದ್ಯುತ್ ವಾಹನಗಳನ್ನೇ ಖರೀದಿಸುವುದು ಉತ್ತಮ’ ಎಂದು ಗ್ರಾಹಕ ರಂಜಿತ್ ಶಂಕರ್ ಹೇಳಿದರು.

ಆದಾಯ ಅಷ್ಟೇ ಇದ್ದು, ವೆಚ್ಚ ಹೆಚ್ಚಾಗಿರುವುದರಿಂದ ಸ್ಥಳೀಯ ಟ್ಯಾಕ್ಸಿ ಮತ್ತು ಆಟೊ ಚಾಲಕರ ದೈನಂದಿನ ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಆಟೊ ಚಾಲಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.