ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಪೀಡಿತ ಮಕ್ಕಳ ಚಿಕಿತ್ಸೆಗೆ ನಿಧಿ ಸಂಗ್ರಹ

Last Updated 18 ಅಕ್ಟೋಬರ್ 2022, 13:41 IST
ಅಕ್ಷರ ಗಾತ್ರ

ಬೆಂಗಳೂರು: ಸನ್‌ರೈಸರ್ಸ್‌ ಇವೆಂಟ್‌ ಪ್ಲಾನರ್‌ ಮತ್ತು ತ್ರಿಶೂಲ ಟ್ರಸ್ಟ್‌ನಿಂದ ಅಕ್ಟೋಬರ್ 30ರಂದು ಮಿಸ್ಟರ್‌ ಆ್ಯಂಡ್‌ ಮಿಸೆಸ್, ಮಿಸ್‌, ಪ್ರಿನ್ಸ್‌ ಮತ್ತು ಪ್ರಿನ್ಸೆಸ್‌ ಡಾಜ್ಲಿಂಗ್ ಇಂಡಿಯಾ–2022 ಸೌಂದರ್ಯ ಸ್ಪರ್ಧೆಯನ್ನು ಹೋಟೆಲ್‌ ಪರಾಗ್‌ನಲ್ಲಿ ಆಯೋಜಿಸಲಾಗಿದೆ.

‘ಕ್ಯಾನ್ಸರ್‌ ಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಮತ್ತು ಜಾಗೃತಿ ಮೂಡಿಸಲು ಈ ಸೌಂದರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ಮಕ್ಕಳು ಸಹ ಭಾಗವಹಿಸಬಹುದು. ಆಡಿಷನ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕ್ಯಾನ್ಸರ್‌ ಪೀಡಿತ ಬಡ ಮಕ್ಕಳಿಗೆ ನೆರವಾಗುತ್ತಿದ್ದೇನೆಂಬ ಮಾನವೀಯ ನೆಲೆಯಲ್ಲಿ ಭಾಗವಹಿಸಬೇಕಿದೆ. ಇದು ಸೌಂದರ್ಯ ಸ್ಪರ್ಧೆ ಎನ್ನುವುದಕ್ಕಿಂತ ಕ್ಯಾನ್ಸರ್‌ ಪೀಡಿತರ ಚಿಕಿತ್ಸೆ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ’ ಎಂದು ತ್ರಿಶೂಲ ಸಂಘದ ಅಧ್ಯಕ್ಷ ಬಿ.ಸಿ. ರಾಜಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು 96067 34980 ಮತ್ತು 9845732329ಗೆ ಸಂಪರ್ಕಿಸಬಹುದು’ ಎಂದು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT