ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಸ್ ಪೈಪ್ ಲೈನ್ ಸೋರಿಕೆ: ಸಂಚಾರ ಮಾರ್ಗ ಬದಲಾವಣೆ

Last Updated 29 ಅಕ್ಟೋಬರ್ 2018, 6:01 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೋ ಕಾಮಗಾರಿಯಲ್ಲಿ ಡ್ರಿಲ್ಲಿಂಗ್ ಮಾಡುವ ವೇಳೆ ಗರುಡಾಚಾರ್ಯ ಪಾಳ್ಯದ ಬಳಿ ಗೇಯ್ಲ್ ಗ್ಯಾಸ್ ಪೈಪ್ ಸೋರಿಕೆಯಾಗಿ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಅವಘಡದಿಂದ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಸ್ಥಳಕ್ಕೆ ಗೇಯ್ಲ್ ತಂಡ ಹಾಗೂ ಅಗ್ನಿಶಾಮಕ ದಳ, ಮೆಟ್ರೋ ಅಧಿಕಾರಿಗಳು ಆಗಮಿಸಿದ್ದು, ಕಾರ್ಯಚರಣೆ ಮುಂದುವರೆದಿದೆ. ಹಾಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ ಕಾರಣ ಐಟಿಪಿಎಲ್ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಾರ್ಗ ಬದಲಾವಣೆ:ವಾಹನಗಳು ದೇವಸಂದ್ರ ಮಾರ್ಗವಾಗಿ ಚಲಿಸಬಹುದು ಅಥವಾ ಮಾರತ್ತಹಳ್ಳಿ ಮತ್ತು ವೈಟ್‌ ಫೀಲ್ಡ್‌ ತಲುಪಲು ಔಟರ್ ರಿಂಗ್ ರೋಡ್ ಬಳಸಬಹುದು.

ಇನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇವಸಂದ್ರ ರಸ್ತೆ ಅಥವಾ ಗ್ರಾಫೈಟ್– ಕುಂದಲಹಳ್ಳಿ–ಮಾರತಹಳ್ಳಿ–ಔಟರ್‌ ರಿಂಗ್‌ ರೋಡ್ ಮೂಲಕ ಹೋಗಬಹುದು

ಇದು ಮೊದಲಲ್ಲ:ಈ ಹಿಂದೆ ಅ.22 ರಂದು ಮಹಾದೇವಪುರದಲ್ಲಿ ಇದೇ ರೀತಿ ಅವಘಡ ಸಂಭವಿಸಿದ್ದು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT