ಭಾನುವಾರ, ಏಪ್ರಿಲ್ 11, 2021
32 °C

ಗೇಲ್‌ ಸಂಸ್ಥೆಯಿಂದ ಆರೋಗ್ಯ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಕೆ.ಆರ್. ಪುರ ಸಿಎನ್‌ಜಿ ಸ್ಟೇಷನ್ ಆವರಣದಲ್ಲಿ ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಗೇಲ್) ಮತ್ತು ರಾಷ್ಟ್ರೀಯ ಯುವ ಪ್ರತಿಷ್ಠಾನದ ಸಹಯೋಗದಲ್ಲಿ ಎರಡು ದಿನಗಳ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದೆ.

ಶನಿವಾರ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಡೆದ ಶಿಬಿರದಲ್ಲಿ ತಜ್ಞ ವೈದ್ಯರಿಂದ ಕಣ್ಣು, ಮೂಗು, ಕಿವಿ, ಗಂಟಲು, ಹಲ್ಲು, ಮಧುಮೇಹ, ಬೆನ್ನುಮೂಳೆ, ಮಂಡಿ ನೋವು, ಸಂಧಿವಾತ, ರಕ್ತದೊತ್ತಡ ತಪಾಸಣೆ ಹಾಗೂ ಇಸಿಜಿ ನಡೆಸಲಾಯಿತು. 300ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. 37 ಮಂದಿ ಆಟೊ ಮತ್ತು ಕ್ಯಾಬ್ ಚಾಲಕರು, ಹಿರಿಯ ನಾಗರಿಕರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.

ಗೇಲ್ ಗ್ಯಾಸ್ ಕಂಪನಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿವೇಕ್ ವಾತೋಡ್ಕರ್ ಉದ್ಘಾಾಟಿಸಿದರು. ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ ಎ. ಬಾಲಸುಬ್ರಮಣಿಯನ್, ಎಚ್.ಪಿ. ಶ್ರೀವಾಸ್ತವ, ವ್ಯವಸ್ಥಾಪಕ ಎನ್.ಎನ್. ರಾವ್, ಉಪಪ್ರಧಾನ ವ್ಯವಸ್ಥಾಪಕ ಸಾಯಿ ಶಂಕರ್ ಪದಾಧಿಕಾರಿಗಳಾದ ಅನಿಮೇಶ್ ರೈ, ಪ್ರತೀಕ್ ತಿವಾರಿ, ತಜ್ಞ ವೈದ್ಯರಾದ ಡಾ.ಅಶೋಕ್ ಚವಾಣ್, ಡಾ.ಸಿ.ಎಸ್. ಅಶೋಕ್, ಡಾ.ಸತ್ಯಾ ಮೆಹ್ರ, ಸೌರಭ್ ದುಬೆ ಭಾಗವಹಿಸಿದರು.

ಜಿಗಣಿಯ ಸಿಎನ್‌ಜಿ ಸ್ಟೇಷನ್‌ ಆವರಣದಲ್ಲಿ ಭಾನುವಾರ ಆರೋಗ್ಯ ಶಿಬಿರವನ್ನು ಏರ್ಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು