ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಂಡಾ ಕಾಯ್ದೆಯಡಿ ಜೂಜುಕೋರನ ಬಂಧನ

Last Updated 21 ಏಪ್ರಿಲ್ 2021, 19:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಕಾನೂನುಬಾಹಿರವಾಗಿ ಜೂಜು ಅಡ್ಡೆಗಳನ್ನು ನಡೆಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಬಿ.ಹರಿರಾಜ ಶೆಟ್ಟಿ (58) ಬಂಧಿತ ಆರೋಪಿ. ಈತ ಬೆಂಗಳೂರಿನ ಹಲವೆಡೆ ಅಕ್ರಮವಾಗಿ ಜೂಜು ಅಡ್ಡೆಗಳನ್ನು ನಡೆಸುತ್ತಿದ್ದ. ವಿವಿಧ ಸ್ಥಳಗಳಲ್ಲಿ ರಿಕ್ರಿಯೇಶನ್ ಕ್ಲಬ್, ವಿಡಿಯೊ ಗೇಮ್ ಸೆಂಟರ್‌ಗಳ ಮೂಲಕ ಜೂಜಾಟ ನಡೆಸುತ್ತಿದ್ದ ಎನ್ನಲಾಗಿದೆ.

ಈ ಸಂಬಂಧ ಆರೋಪಿಯ ವಿರುದ್ಧ ವೈಯಾಲಿ ಕಾವಲ್, ಹೈಗ್ರೌಂಡ್ಸ್‌, ಕಬ್ಬನ್ ಪಾರ್ಕ್, ಕೋರಮಂಗಲ, ಅಶೋಕ್ ನಗರ, ಕೆ.ಪಿ.ಅಗ್ರಹಾರ, ಬಸವೇಶ್ವರನಗರ ಹಾಗೂ ಇಂದಿರಾನಗರ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು.

‘ಅಕ್ರಮ ಜೂಜು ಅಡ್ಡೆಗಳ ಮೇಲೆ ಈ ಹಿಂದೆಯೂ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಕ್ರಮಕೈಗೊಂಡಿದ್ದರು. ಆದರೂ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಮುಂದುವರಿದಿದ್ದ. ಈತನ ವಿರುದ್ಧ ಕ್ರಮ ಕೈಗೊಂಡ ಪೊಲೀಸ್ ಅಧಿಕಾರಿಗಳ ಮೇಲೆ ಸುಳ್ಳು ಆರೋಪಗಳ ಹೊರಿಸಿ, ತೇಜೋವಧೆ ಮಾಡುತ್ತಿದ್ದ. ಈ ಸಂಬಂಧ ಸಿಸಿಬಿ ಅಧಿಕಾರಿಗಳು ಸಲ್ಲಿಸಿದ್ದ ವರದಿ ಅನ್ವಯ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶಿಸಿದ್ದರು‘ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಇಂತಹ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರಿಗೆ ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ. ಇದೇ ಮೊದಲ ಬಾರಿಗೆ ಜೂಜುಕೋರನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ’ ಎಂದೂ ಸಿಸಿಬಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT