ಗಲಭೆ ಸಾಧ್ಯತೆ: ಎಂಟು ಠಾಣೆಗಳ ವ್ಯಾಪ್ತಿಯಲ್ಲಿ ಭದ್ರತೆ

7
ಗುಪ್ತದಳದಿಂದ ಮಾಹಿತಿ

ಗಲಭೆ ಸಾಧ್ಯತೆ: ಎಂಟು ಠಾಣೆಗಳ ವ್ಯಾಪ್ತಿಯಲ್ಲಿ ಭದ್ರತೆ

Published:
Updated:

ಬೆಂಗಳೂರು: ವಿಘ್ನೇಶ್ವರ ಉತ್ಸವ ಸಮಿತಿಯು ಶನಿವಾರ 71 ಗಣೇಶ ಮೂರ್ತಿಗಳನ್ನು ಹಲಸೂರು ಕೆರೆಯಲ್ಲಿ ವಿಸರ್ಜನೆ ಮಾಡಲಿದ್ದು, ಮೆರವಣಿಗೆ ಶಾಂತಿಯುತವಾಗಿ ನಡೆಯಬೇಕೆಂದು ಮುಂಜಾಗ್ರತಾ ಕ್ರಮವಾಗಿ ಎಂಟು ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬಂದ್ ಮಾಡಿ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮರ್ ಆದೇಶ ಹೊರಡಿಸಿದ್ದಾರೆ.

‘ಈ ಮೆರವಣಿಗೆಗಳಲ್ಲಿ ಸುಮಾರು 5 ಸಾವಿರ ಜನ ಪಾಲ್ಗೊಳ್ಳುವ ಸಾಧ್ಯತೆ ಇದೆ. ಮರವಣಿಗೆ ಸಾಗುವ ರಸ್ತೆಗಳು ತುಂಬ ಸೂಕ್ಷ್ಮ ಪ್ರದೇಶಗಳಾಗಿವೆ. ಮದ್ಯದ ಅಮಲಿನಲ್ಲಿ ಯಾರೋ ಗಲಾಟೆ ಮಾಡಿ, ಅದು ದೊಡ್ಡ ಗಲಭೆಗೆ ಕಾರಣವಾಗಬಾರದು. ಹೀಗಾಗಿ, ಜೆ.ಸಿ.ನಗರ, ಆರ್‌.ಟಿ.ನಗರ. ಹೆಬ್ಬಾಳ, ಸಂಜಯನಗರ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಪುಲಕೇಶಿನಗರ ಹಾಗೂ ಭಾರತೀನಗರ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಸ್ಥಗಿತಗೊಳಿಸುವಂತೆ ಆದೇಶಿಸಿದ್ದೇನೆ’ ಎಂದು ಕಮಿಷನರ್ ಹೇಳಿದ್ದಾರೆ.

‘ಈ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಾರ್, ವೈನ್‌ಶಾಪ್ ಹಾಗೂ ಪಬ್‌ಗಳನ್ನು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ ಬಂದ್ ಮಾಡಬೇಕು. ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ, ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳು ದಾಂದಲೆ ನಡೆಸುವ ಸಾಧ್ಯತೆ ಬಗ್ಗೆ ಗುಪ್ತದಳದಿಂದ ಮಾಹಿತಿ ಬಂದಿದೆ. ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿದಾಗ, ಆ ಮಾಹಿತಿಯಲ್ಲಿ ಸಾಕಷ್ಟು ಸತ್ಯಾಂಶ ಕಂಡುಬಂದಿದೆ. ಹೀಗಾಗಿ, ಪೊಲೀಸರ ಭದ್ರತೆಯನ್ನು ಹೆಚ್ಚಿಸಲಾಗಿದೆ’ ಎಂದು ಕಮಿಷನರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !