ಪೀಣ್ಯ ದಾಸರಹಳ್ಳಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಮಾರು ₹11 ಕೋಟಿ ವೆಚ್ಚದಲ್ಲಿ ಚಿಕ್ಕಬಾಣಾವರ ಬಳಿಯ ಗಾಣಿಗರಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲಿದೆ ಎಂದು ಶಾಸಕ ಎಸ್. ಮುನಿರಾಜು ಹೇಳಿದರು.

ಗಾಣಿಗರಹಳ್ಳಿ ಕೆರೆ ಪುನರುಜ್ಜೀವನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲುಷಿತಗೊಂಡಿದ್ದ ಈ ಕೆರೆಯನ್ನು ಡಾ. ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಯ ಜೊತೆಗೆ ಪುನರುಜ್ಜೀವನಗೊಳಿಸಲಿದೆ ಎಂದರು.

ಸುತ್ತಮುತ್ತಲ ಜಾಗವನ್ನು ಬಿಡಿಎ ಅಭಿವೃದ್ಧಿ ಮಾಡುತ್ತಿರುವುದರಿಂದ ಅದರ ಜೊತೆಗೆ ಕಲುಷಿತಗೊಂಡಿದ್ದ ಕೆರೆಯನ್ನು ಸ್ವಚ್ಛ ಸುಂದರ ವನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದು ಸುಮಾರು ವರ್ಷಗಳ ಜನರ ಜೀವನ ನಾಡಿಯಂತಿತ್ತು ಎಂದರು.

ಪುನರುಜ್ಜೀವನದ ಭಾಗವಾಗಿ ಕೆರೆಯಲ್ಲಿ ಬೆಳೆದಿದ್ದ ಗಿಡಮರಗಳ ತೆರವು, ಕೆರೆಯ ಹೂಳು ತೆಗೆಯುವಿಕೆ, ಕೆರೆಯ ಉದ್ದಕ್ಕೂ ಮಣ್ಣಿನ ಏರಿ ಮತ್ತು ನಡಿಗೆ ಪಥ, ಏರಿಯ ಒಳಭಾಗದಲ್ಲಿ ಕಲ್ಲಿನ ಜೋಡಣೆ, ಕೆರೆಯ ಸುತ್ತಲೂ ತಂತಿ ಬೇಲಿ ಅಳವಡಿಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೆರೆಯ ವಿಸ್ತೀರ್ಣ ಸುಮಾರು 54 ಎಕರೆ ಇದ್ದು, ಇದರಲ್ಲಿ ಸ್ವಲ್ಪ ಜಾಗ ಓತ್ತುವರಿಯಾಗಿದೆ. ಅದನ್ನು ಸರ್ವೇ ಮಾಡಿಸಲಾಗುವುದು. ಕೆರೆಗೆ ಕಲುಷಿತ ನೀರು ಬರದಂತೆ ತಡೆಯಲಾಗುವುದು ಎಂದರು.

ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಮಂಜುನಾಥ್, ಬಿಡಿಎ ಎಂಜಿನಿಯರ್ ಅವಲಪ್ಪ, ಬಿಜೆಪಿ ಮುಖಂಡರಾದ ಶ್ರೀನಿವಾಸಮೂರ್ತಿ, ಭಾಗ್ಯಮ್ಮ ಕೃಷ್ಣಯ್ಯ, ಗಿರೀಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.