ಬುಧವಾರ, ಏಪ್ರಿಲ್ 14, 2021
31 °C

10 ಕೆ.ಜಿ ಗಾಂಜಾ ಜಪ್ತಿ; ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಜಾ–ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂಬೈನಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಅಂಜನಾಪುರದ ರಿಜ್ವಾನ್ ಪಾಷಾ (29), ಕೆಂಗೇರಿ ಕೋನಸಂದ್ರದ ಶಬ್ಬೀರ್ ಪಾಷಾ (31), ತುಮಕೂರು ಗುಬ್ಬಿ ಗೇಟ್‌ನ ವಾಸೀಂ ಅಕ್ರಮ್ (31) ಹಾಗೂ ಪಿ.ಎಚ್. ಕಾಲೋನಿಯ ಮೊಹಮ್ಮದ್ ಕುತ್‌ಬುದ್ದೀನ್ ಪಾಷಾ (38) ಬಂಧಿತರು. ಅವರಿಂದ ₹ 5 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾ, 4 ಮೊಬೈಲ್ ಹಾಗೂ ಗೂಡ್ಸ್ ವಾಹನ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಗೂಡ್ಸ್ ವಾಹನ ಚಾಲಕನಾಗಿದ್ದ ರಿಜ್ವಾನ್ ಪಾಷಾ, ಮುಂಬೈನಲ್ಲಿರುವ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ. ಅವರ ಮೂಲಕ ಗಾಂಜಾ ಖರೀದಿಸಿ ತನ್ನದೇ ಗೂಡ್ಸ್ ವಾಹನದಲ್ಲಿ ನಗರಕ್ಕೆ ತರುತ್ತಿದ್ದ. ಇತರೆ ಆರೋಪಿಗಳ ಜೊತೆ ಸೇರಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ’ ಎಂದೂ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.