ಗುರುವಾರ , ಜೂನ್ 24, 2021
27 °C
ಹಬ್ಬದ ಆಚರಣೆಗೆ ನಿರ್ಬಂಧ l ಹೂವು-ಹಣ್ಣಿನ ದರ ಸ್ಥಿರ

ಗಣೇಶ ಚತುರ್ಥಿ: ಏರಿದ ತರಕಾರಿ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೌರಿ ವ್ರತ ಹಾಗೂ ಗಣೇಶ ಚತುರ್ಥಿ ಸಮೀಪಿಸುತ್ತಿರುವುದರಿಂದ ತರಕಾರಿ ದರಗಳು ಏರಿಕೆ ಕಂಡಿವೆ. ಆದರೆ, ಹೂವು, ಹಣ್ಣು, ಸೊಪ್ಪಿನ ದರಗಳು ಯಥಾಸ್ಥಿತಿಯಲ್ಲೇ ಇವೆ.

ಕೆ.ಆರ್.ಮಾರುಕಟ್ಟೆ ಸದ್ಯ ಬಂದ್ ಆಗಿದೆ. ಈ ಮಧ್ಯೆ, ಕೊರೊನಾ ಕಾರಣಕ್ಕೆ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ನಿರ್ಬಂಧ ಹೇರಿರುವುದರಿಂದಲೂ ಹೂವು, ಹಣ್ಣಿನ ದರಗಳು ಸ್ಥಿರತೆ ಕಾಯ್ದುಕೊಂಡಿವೆ. ಸದ್ಯಕ್ಕೆ ಹೂವಿನ ದರಗಳು ಎಂದಿನಂತಿದ್ದು, ಗುರುವಾರದ ವೇಳೆ ಕೊಂಚ ಏರುವ ನಿರೀಕ್ಷೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

‘ತಿಂಗಳಿನಿಂದ ಆಗಾಗ್ಗೆ ಸುರಿದ ಭಾರಿ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿಯಾಗಿತ್ತು. ಇದರಿಂದ ಮಾರುಕಟ್ಟೆಗಳಿಗೆ ಆವಕ ಪ್ರಮಾಣ ತುಸು ಕಡಿಮೆಯಾಗಿದೆ. ಹಬ್ಬ ಸಮೀಪಿಸುತ್ತಿರುವುದರಿಂದ ಸಹಜವಾಗಿ ದರ ಏರಿದೆ’ ಎಂದು ದಾಸನಪುರ ಎಪಿಎಂಸಿ ಮಾರುಕಟ್ಟೆಯ ತರಕಾರಿ ಮತ್ತು ಸೊಪ್ಪಿನ ವ್ಯಾಪಾರಿ ಕುಮಾರ್ ತಿಳಿಸಿದರು.

‘ತರಕಾರಿಗಳಲ್ಲಿ ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ ಹಾಗೂ ಶುಂಠಿ ದರ ಏರಿವೆ. ನಾಟಿ ಕೊತ್ತಂಬರಿ ಈಗ ಹಾಸನದಿಂದ ಮಾತ್ರ ಬರುತ್ತಿದೆ. ತಮಿಳುನಾಡಿನಿಂದ ಫಾರಂ ತಳಿಯ ಕೊತ್ತಂಬರಿ ಸೊಪ್ಪು ಆವಕವಾಗುತ್ತಿದೆ. ನಾಟಿ ಕೊತ್ತಂಬರಿ ಪ್ರತಿ ಕಟ್ಟಿಗೆ ₹30ರಂತೆ ಮಾರಾಟವಾಗುತ್ತಿದೆ. ಉಳಿದಂತೆ ದಂಟು, ಪಾಲಕ್, ಸಬ್ಬಕ್ಕಿ ಸೊಪ್ಪುಗಳ ದರ ₹15 ದಾಟಿಲ್ಲ’ ಎಂದರು.

‘ಗಣೇಶ ಚತುರ್ಥಿ ಸಾರ್ವಜನಿಕ ಆಚರಣೆ ವಿಜೃಂಭಣೆಯಾಗಿ ನಡೆಯುತ್ತದೆ. ಮೂರ್ತಿ ಪ್ರತಿಷ್ಠಾಪನೆ, ನಿತ್ಯ ಪೂಜೆ ಹಾಗೂ ವಿಸರ್ಜನೆ ಸಂದರ್ಭಗಳಲ್ಲೂ ಹೂವು ಹೆಚ್ಚಾಗಿ ಬಳಕೆಯಾಗುತ್ತಿತ್ತು. ಆದರೆ, ಈ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಆಚರಣೆಗೆ ನಿರ್ಬಂಧ ಇದೆ. ಮನೆಗಳಲ್ಲಿ ಮಾತ್ರ ಹಬ್ಬ ನಡೆಯುವುದರಿಂದ ಹೂವಿನ ದರ ಕೊಂಚ ಏರಬಹುದು’ ಎಂದರು ವ್ಯಾಪಾರಿ ಎಸ್.ಮೋಹನ್.

ದರಗಳ ಪಟ್ಟಿ (ಪ್ರತಿ ಕೆ.ಜಿ.ಗೆ ₹ಗಳಲ್ಲಿ)

ಹಣ್ಣು: ಹಾಪ್‍ಕಾಮ್ಸ್ ದರ: ಸಗಟು ದರ
ಸೇಬು
: 196: 120
ದಾಳಿಂಬೆ: 124: 100
ದ್ರಾಕ್ಷಿ: 136: 90
ಸಪೋಟ : 80: 60
ಸೀತಾಫಲ: 62: 50
ಮೂಸಂಬಿ: 60: 70
ಏಲಕ್ಕಿ ಬಾಳೆ: 66: 60
ಸೀಬೆ: 40: 35
ಅನಾನಸ್: 35: 40

ತರಕಾರಿ: ಹಾಪ್‍ಕಾಮ್ಸ್ ದರ: ಸಗಟು ದರ 
ಬಟಾಣಿ
: 254: 150
ಬೆಳ್ಳುಳ್ಳಿ: 155: 140
ಶುಂಠಿ: 120: 100
ಬೀನ್ಸ್: 67: 80
ಕ್ಯಾರೆಟ್: 70: 50
ಮೆಣಸಿನಕಾಯಿ: 48: 45
ಆಲೂಗಡ್ಡೆ: 43: 30
ಈರುಳ್ಳಿ: 21: 25
ಟೊಮೆಟೊ: 27: 20

ಸೊಪ್ಪು: ಹಾಪ್‍ಕಾಮ್ಸ್ ದರ (ಪ್ರತಿ ಕೆ.ಜಿಗೆ): ಸಗಟು ದರ (ಪ್ರತಿ ಕಟ್ಟಿಗೆ)
ಕೊತ್ತಂಬರಿ
: 135: 30
ಮೆಂತ್ಯ: 80: 15
ಸಬ್ಬಕ್ಕಿ: 60: 12
ಪಾಲಕ್: 56: 15
ದಂಟು: 48: 12

ಹೂವಿನ ದರಗಳು (ಪ್ರತಿ ಕೆ.ಜಿ.ಗೆ ₹ಗಳಲ್ಲಿ)
ಕನಕಾಂಬರ
: 1,000
ಮಲ್ಲಿಗೆ: 400
ಸೇವಂತಿಗೆ: 160
ಗುಲಾಬಿ: 150
ಗೆನ್ನೇರಿ(ಕಣಗಲೆ): 120

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು