ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್ವಾರು ಮತದಾರರ ಪರಿಷ್ಕೃತ ಕರಡು ಪಟ್ಟಿ ನಾಗರಿಕರಿಗೆ ಸಿಗುತ್ತಿಲ್ಲ. ಆನ್ಲೈನ್ನಲ್ಲಿ ಎಲ್ಲವೂ ಲಭ್ಯ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ಅವರು ಹೇಳಿದ್ದರೂ, ಅಲ್ಲಿ ಮಾಹಿತಿಯೇ ಇಲ್ಲ.

ಜಿಬಿಎ ವೆಬ್ಸೈಟ್ನಲ್ಲಿ (https://gba.karnataka.gov.in/electoral2026/) ಮತದಾರರ ಪಟ್ಟಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಮತದಾರರ ಗುರುತಿನ ಚೀಟಿ (ಎಪಿಕ್) ಸಂಖ್ಯೆ, ಮತದಾರರ ಹೆಸರು ಹಾಗೂ ಮತಗಟ್ಟೆವಾರು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದು ಎಂದು ಜಿಬಿಎ ಹೇಳಿತ್ತು.

ಈ ಮೂರೂ ಆಯ್ಕೆಗಳು ವೆಬ್ಸೈಟ್ನಲ್ಲಿ ಲಭ್ಯವಿವೆ. ಇದರಲ್ಲಿ ಎಪಿಕ್ ಹಾಗೂ ಮತದಾರರ ಹೆಸರಿನಲ್ಲಿ ಮತದಾರರ ಪಟ್ಟಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಈ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ, ಆ ಪುಟ ತೆರೆದುಕೊಳ್ಳುವುದಿಲ್ಲ. ಇನ್ನು ಮತಗಟ್ಟೆವಾರು ಮತದಾರರು ತಮ್ಮ ಹೆಸರನ್ನು ಪರಿಶೀಲಿಸಲು ಮುಂದಾದರೆ, ನಗರ ಪಾಲಿಕೆ, ವಾರ್ಡ್ ಸಂಖ್ಯೆ, ಮತಗಟ್ಟೆ ವಿವರ ಬರುತ್ತದೆ. ಮತಗಟ್ಟೆ ಸಂಖ್ಯೆ ಗೊತ್ತಿದ್ದರೆ ಅದನ್ನು ಹುಡುಕಿ, ಆ ಪಟ್ಟಿಯಲ್ಲಿರುವ ಸಾವಿರಾರು ಹೆಸರುಗಳಲ್ಲಿ ತಮ್ಮ ಹೆಸರನ್ನು ಮತದಾರರು ಹುಡುಕಬೇಕು.

‘ಮತಗಟ್ಟೆ ಸಂಖ್ಯೆ ಎಲ್ಲರಿಗೂ ಗೊತ್ತಿರುವುದಿಲ್ಲ. ಎಪಿಕ್ ಸಂಖ್ಯೆ ಹಾಗೂ ಮತದಾರರ ಹೆಸರಿನಿಂದ ಮತಪಟ್ಟಿಯಲ್ಲಿ ನಮ್ಮ ಹೆಸರಿದೆಯೇ ಎಂದು ಹುಡುಕುವುದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಗಂಗಾನಗರ ನಿವಾಸಿ ಸುಬ್ರಹ್ಮಣ್ಯ ದೂರಿದರು.

ಮತಗಟ್ಟೆ ಸಂಖ್ಯೆಯನ್ನು ಅರಿತುಕೊಂಡು, ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿರುವುದನ್ನು ಹುಡುಕುವುದು ತ್ರಾಸದಾಯಕವಾಗಿದೆ. ಎಪಿಕ್ ಹಾಗೂ ಮತದಾರರ ಹೆಸರಿನ ಆಯ್ಕೆ ಇಲ್ಲದಿರುವುದು ಸಾಕಷ್ಟು ಸಮಸ್ಯೆ ಉಂಟು ಮಾಡಿದೆ. ಈ ಬಗ್ಗೆ, ಜಿಬಿಎ ಅಧಿಕಾರಿಗಳಿಗೆ ಅರಿವಿಲ್ಲ.

‘ವೆಬ್ಸೈಟ್ನಲ್ಲಿ ಎಪಿಕ್ ಸಂಖ್ಯೆ, ಮತದಾರರ ಹೆಸರಿನಲ್ಲಿ, ಹೆಸರು ಪಟ್ಟಿಯಲ್ಲಿದೆಯೇ ಎಂದು ಹುಡುಕಿ’ ಎಂದು ಜಿಬಿಎ ಚುನಾವಣೆ ವಿಭಾಗದ ಉಪ ಆಯುಕ್ತ ಶ್ರೀನಿವಾಸ್ ಹೇಳಿದರು. ‘ಅಲ್ಲಿ ಆ ಆಯ್ಕೆ ತೆರೆದುಕೊಳ್ಳುತ್ತಿಲ್ಲ’ ಎಂದು ಪತ್ರಿಕೆಯ ಪ್ರತಿನಿಧಿ ಹೇಳಿದಾಗ, ಆ ಬಗ್ಗೆ ಮಾಹಿತಿಯೇ ಇರದ ಶ್ರೀನಿವಾಸ್ ಅವರು, ‘ಮಂಗಳವಾರ ಈ ಬಗ್ಗೆ ಪರಿಶೀಲನೆ ನಡೆಸಿ, ಮಾಹಿತಿ ನೀಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಅವಧಿ ವಿಸ್ತರಣೆ

ಐದು ನಗರ ಪಾಲಿಕೆಗಳ ವಾರ್ಡ್ವಾರು ಮತದಾರರ ಪರಿಷ್ಕೃತ ಕರಡು ಪಟ್ಟಿಗೆ ನಾಗರಿಕರು ದೂರು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಮಾರ್ಚ್ 20ರವರೆಗೆ ವಿಸ್ತರಿಸಲಾಗಿದೆ ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.

ಮತದಾರರ ಪರಿಷ್ಕೃತ ಕರಡು ಪಟ್ಟಿಯ ಕುರಿತು ದೂರು ಮತ್ತು ಆಕ್ಷೇಪಣೆ ಗಳಿದ್ದಲ್ಲಿ ಮಾರ್ಚ್ 10ರಿಂದ ಮಾರ್ಚ್ 16ರವರೆಗೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ದೂರು ಮತ್ತು ಆಕ್ಷೇಪಣೆ ಅವಧಿಯನ್ನು ವಿಸ್ತರಿಸಲು ಒಕ್ಕೊರಲಿನಿಂದ ಮನವಿ ಮಾಡಿದ್ದರು. ಹೀಗಾಗಿ, ರಾಜ್ಯ ಚುನಾವಣಾ ಆಯೋಗಕ್ಕೆ ಅವಧಿಯನ್ನು ವಿಸ್ತರಿಸಲು ಕೋರಿ ಪ್ರಸ್ತಾವ ಸಲ್ಲಿಸಲಾಗಿತ್ತು. ಪ್ರಸ್ತಾವವನ್ನು ಆಯೋಗ ಪರಿಗಣಿಸಿದೆ. ಅದರಂತೆ, ದೂರು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.