ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ವಾರು ಮತದಾರರ ಪರಿಷ್ಕೃತ ಕರಡು ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಕರಡು ಪಟ್ಟಿಯಲ್ಲಿದ್ದ ಮತದಾರರ ಸಂಖ್ಯೆಗಿಂತ ಸುಮಾರು ಒಂದು ಸಾವಿರದಷ್ಟು ಮತದಾರರು ಕಡಿಮೆಯಾಗಿದ್ದಾರೆ

2026ರ ಜನವರಿ 19ರಂದು ಐದು ನಗರ ಪಾಲಿಕೆ ವಾರ್ಡ್ಗಳ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿತ್ತು. ರಾಜಕೀಯ ಪಕ್ಷಗಳು ಹಾಗೂ ನಾಗರಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಪರಿಷ್ಕೃತ ಕರಡು ಪಟ್ಟಿಯನ್ನು ಪ್ರಕಟಿಸಿದೆ.

‘ಕರಡು ಪಟ್ಟಿಯಲ್ಲಿ ಹಲವು ಮತದಾರರ ಹೆಸರು ಎರಡು ವಾರ್ಡ್ಗಳಲ್ಲಿತ್ತು. ಮ್ಯಾಟ್ರಿಕ್ಸ್ನಲ್ಲಿ ಸಮಸ್ಯೆ ಇತ್ತು ಎಂದು ರಾಜಕೀಯ ಪಕ್ಷಗಳ ಏಜೆಂಟರು ದೂರಿದ್ದರು. ಹೀಗಾಗಿ, ಅದರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ, ಮಾರ್ಪಾಡು ಮಾಡಿ ಮತದಾರರ ಪರಿಷ್ಕೃತ ಕರಡು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 51- ಸುಬ್ರಹ್ಮಣ್ಯಪುರದಲ್ಲಿ ಅತಿಹೆಚ್ಚು (54,026) ಮತದಾರರಿದ್ದಾರೆ. ಬೆಂಗಳೂರು ಪೂರ್ವ ನಗರಪಾಲಿಕೆಯ ವಾರ್ಡ್ ಸಂಖ್ಯೆ 16-ಕೊತ್ತೂರು ಅತಿ ಕಡಿಮೆ (10,940) ಮತದಾರರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ವಾರ್ಡ್ವಾರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಆನ್ಲೈನ್ನಲ್ಲಿ (https://gba.karnataka.gov.in/ home) ಎಪಿಕ್ ಸಂಖ್ಯೆ ಅಥವಾ ಅವರ ಹೆಸರಿನ ಮೂಲಕ ಹುಡುಕಬಹುದಾಗಿದೆ. ಸಾರ್ವಜನಿಕರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಂಡು ಖಚಿತಪಡಿಸಿ ಕೊಳ್ಳಬಹುದಾಗಿದೆ. ಒಂದು ವೇಳೆ ಪರಿಷ್ಕೃತ ಪಟ್ಟಿಯಲ್ಲಿ ಹೆಸರು ಇಲ್ಲವಾಗಿದ್ದಲ್ಲಿ ಅಥವಾ ಮತ್ತೊಂದು ವಾರ್ಡ್ ವ್ಯಾಪ್ತಿಯಲ್ಲಿ ಹೆಸರು ಪ್ರಕಟವಾಗಿದ್ದಲ್ಲಿ ಮಾರ್ಚ್ 16ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಏಪ್ರಿಲ್ 6ರಂದು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದರು.

ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಾರ್ಡಿನ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವೆಲ್ ಏಜೆಂಟ್ (ಬಿಎಲ್ಎ) ನೇಮಕಾತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಎಲ್ಲಾ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕಾರ ನೀಡಲು ಕೋರಲಾಗಿದೆ. ಘನತ್ಯಾಜ್ಯ ನಿಗಮದ ವತಿಯಿಂದ ಮನೆ ಕಸ ಸಂಗ್ರಹಣೆ ಮಾಡುವ ಆಟೊಗಳಲ್ಲಿನ ಧ್ವನಿವರ್ಧಕಗಳ ಮೂಲಕ ಪರಿಷ್ಕೃತ ಕರಡು ಪಟ್ಟಿ ಪ್ರಚಾರ ಮಾಡಲಾಗುವುದು. ಅದರ ಜೊತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಎಕ್ಸ್ ಖಾತೆಗಳಲ್ಲಿಯೂ ಪ್ರಚಾರ ನೀಡಲಾಗುವುದು ಎಂದು ಹೇಳಿದರು.

‘ಸರ್ಕಾರದ ತೀರ್ಮಾನದಂತೆ ಮೀಸಲಾತಿ’

‘ಐದು ನಗರ ಪಾಲಿಕೆಗಳ ವಾರ್ಡ್ಗಳ ಮೀಸಲಾತಿಯನ್ನು ಸರ್ಕಾರದ ತೀರ್ಮಾನದಂತೆ ಪ್ರಕಟಿಸಲಾಗಿದೆ. ಬಂದಿರುವ ಎಲ್ಲ ಆಕ್ಷೇಪಣೆಗಳನ್ನು ಪರಿಗಣಿಸಿ, ಸರ್ಕಾರ ತನ್ನದೇ ತೀರ್ಮಾನವನ್ನು ತೆಗೆದುಕೊಂಡಿದೆ. ಮೀಸಲಾತಿ ನಿಗದಿಪಡಿಸುವ ಬಗ್ಗೆ ಅದರದ್ದೇ ಆದ ಮಾನದಂಡಗಳಿವೆ’ ಎಂದು ಮಹೇಶ್ವರ್ ರಾವ್ ತಿಳಿಸಿದರು.

‘ಜಿಬಿಎ ವ್ಯಾಪ್ತಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.