ಬೆಂಗಳೂರು: ‘ಭಯದ ವಾತಾವರಣ ಸೃಷ್ಟಿಸಲು ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹಳ್ಳಿಯ ಸೇತುವೆಯ ಬಳಿ ಜಿಲೆಟಿನ್ ಕಡ್ಡಿಗಳನ್ನು ರಾತ್ರೋರಾತ್ರಿ ಇಟ್ಟು ದುಷ್ಕರ್ಮಿಗಳು ಪರಾರಿ ಆಗಿದ್ದಾರೆ’ ಎಂಬುದು ಪೊಲೀಸ್ ತನಿಖೆ ವೇಳೆ ಪತ್ತೆಯಾಗಿದೆ.

ಮೇ 10ರಂದು ನಡೆದ ‘ದಿ ಆರ್ಟ್ ಆಫ್ ಲಿವಿಂಗ್’ನ 45ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ನಗರಕ್ಕೆ ಬಂದಿದ್ದರು. ಅವರು ಸಂಚರಿಸಿದ ನೈಸ್ ರಸ್ತೆಯ ಸಮೀಪವೇ ಬಾಕ್ಸ್ನಲ್ಲಿ ಜಿಲೆಟಿನ್ ಕಡ್ಡಿಗಳನ್ನು ತುಂಬಿಡಲಾಗಿತ್ತು. ಆ ಬಾಕ್ಸ್ನಲ್ಲಿ ಗಂಧದ ಕಡ್ಡಿ, ಕರ್ಪೂರವೂ ಪತ್ತೆಯಾಗಿದ್ದವು. ಪ್ರಕರಣದ ತನಿಖೆಗೆ ಸಿಸಿಬಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸರ ನೇತೃತ್ವದಲ್ಲಿ 6 ತಂಡಗಳನ್ನು ರಚಿಸಲಾಗಿತ್ತು.

‘ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಇದುವರೆಗೂ ನಡೆದಿರುವ ತನಿಖೆಯಲ್ಲಿ ಕೆಲವು ಅಂಶಗಳು ಪತ್ತೆ ಆಗಿವೆ. ತಮ್ಮ ವಿರೋಧಿ ಗಳನ್ನು ಹೆದರಿಸಲು ಕೆಲವರು ಜಿಲೆಟಿನ್ ಕಡ್ಡಿಗಳನ್ನು ತಂದಿಟ್ಟಿದ್ದಾರೆ. ಅಲ್ಲದೇ ಪರಿಶೀಲನೆ ವೇಳೆ ಸ್ಫೋಟಕ ವಸ್ತುಗಳು ಪತ್ತೆಯಾದರೆ, ಮೋದಿ ಅವರು ಭದ್ರತಾ ಕಾರಣ ನೀಡಿ ಕಾರ್ಯಕ್ರಮಕ್ಕೆ ಬಾರದೇ ವಾಪಸ್ ಹೋಗುತ್ತಾರೆ ಎಂಬ ಕಾರಣಕ್ಕೆ ಸಂಚು ರೂಪಿಸಿರುವುದು ಕಂಡುಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಾಕ್ಸ್ನಲ್ಲಿ ತುಂಬಿಟ್ಟಿದ್ದು 3 ವರ್ಷದ ಹಳೆಯ ಜಿಲೆಟಿನ್ ಕಡ್ಡಿಗಳು ಎಂಬುದು ಕಂಡು ಬಂದಿದೆ. ಜಿಲೆಟಿನ್ ಕಡ್ಡಿಗಳು ಹಾಗೂ ಎಲೆಕ್ಟ್ರಿಕ್ ಸರ್ಕ್ಯೂಟ್ ಬೋರ್ಡ್ಗಳ ವೈರ್ಗಳನ್ನು ಪರಸ್ಪರ ಸಂಪರ್ಕಿಸಿಲ್ಲ. ಹೀಗಾಗಿ ಬೆದರಿಸುವ ಉದ್ದೇಶದಿಂದ ಅಷ್ಟೇ ಬಾಕ್ಸ್ ತಂದಿಟ್ಟಿ ರುವುದು ಸ್ಪಷ್ಟವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.