ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದ ಆಕರಕೋಶ: ಬಾಲಕನಿಗೆ ಜರ್ಮನಿ ಯುವಕ ನೆರವು

Last Updated 29 ಆಗಸ್ಟ್ 2021, 3:02 IST
ಅಕ್ಷರ ಗಾತ್ರ

ಬೆಂಗಳೂರು: ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದ ನಗರದ 11 ವರ್ಷದ ಬಾಲಕನಿಗೆ ಜರ್ಮನಿಯ 26 ವರ್ಷದ ವ್ಯಕ್ತಿಯೊಬ್ಬರುರಕ್ತದ ಆಕರಕೋಶಗಳನ್ನು ದಾನ ಮಾಡಿದ್ದು, ಬಾಲಕ ಚೇತರಿಸಿಕೊಳ್ಳಲು ನೆರವಾಗಿದ್ದಾರೆ.

ಜಾಗತಿಕ ರಕ್ತದ ಆಕರಕೋಶ ದಾನಿಗಳ ನೋಂದಣಿ ಸೇವಾ ಸಂಸ್ಥೆ ‘ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇಷನ್’ ಆಯೋಜಿಸಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಬಾಲಕ ಹಾಗೂರಕ್ತದ ಆಕರಕೋಶ ದಾನಿ ಪರಸ್ಪರ ಮುಖಾಮುಖಿಯಾದರು.

‘ತ್ವರಿತ್ ಹೆಸರಿನ ಬಾಲಕನ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ರಕ್ತದ ಜೀವಕೋಶಗಳು ಉತ್ಪಾದನೆಯಾಗುತ್ತಿರಲಿಲ್ಲ. ಚೇತರಿಸಿಕೊಳ್ಳಲುರಕ್ತದ ಆಕರಕೋಶ ಕಸಿ ಅಗತ್ಯವಾಗಿತ್ತು.ಡುಕ್ ಫಾಮ್ ಎಂಗಾಕ್ ಎಂಬುವವರು ರಕ್ತದ ಆಕರಕೋಶ ದಾನಕ್ಕೆ ಆರು ವರ್ಷಗಳ ಹಿಂದೆಯೇ ಹೆಸರುನೋಂದಾಯಿಸಿದ್ದರು. ಅವರರಕ್ತದ ಆಕರಕೋಶವು ಬಾಲಕನಿಗೆ ಹೊಂದಾಣಿಕೆಯಾಯಿತು’ ಎಂದು ಸಂಸ್ಥೆ ತಿಳಿಸಿದೆ.

‘ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಸಹಾಯಕ. ದಾನಿಗಳ ರಕ್ತದಿಂದ ಆಕರ ಕೋಶಗಳನ್ನು ಪಡೆದು, ಅಸ್ಥಿಮಜ್ಜೆ ಹಾಳಾಗಿರುವಂತಹ ರೋಗಿಗಳಿಗೆ ಕಸಿ ಮಾಡಲಾಗುತ್ತದೆ. ಇದು ಅಗತ್ಯವಿರುವಂತಹ ರೋಗಿಗಳ ಕುಟುಂಬದಲ್ಲಿ ಹೊಂದಾಣಿಕೆಯಾಗಬಲ್ಲ ದಾನಿಗಳು ಸಿಗುವುದು ಕಷ್ಟ’ ಎಂದು ಬಾಲಕನಿಗೆ ಚಿಕಿತ್ಸೆನೀಡಿದನಾರಾಯಣ ಹೆಲ್ತ್ ಸಿಟಿಯ ಡಾ. ಸುನಿಲ್ ಭಟ್ ತಿಳಿಸಿದ್ದಾರೆ.

ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇಷನ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ಯಾಟ್ರಿಕ್ ಪಾಲ್‍, ‘ಶೇ 30ರಷ್ಟು ರೋಗಿಗಳಿಗೆ ಮಾತ್ರ ಕುಟುಂಬದ ಸದಸ್ಯರು ಅಥವಾ ಸಂಬಂಧಿಗಳ ರಕ್ತದ ಆಕರ ಕೋಶ ಹೊಂದಾಣಿಕೆಯಾಗುತ್ತದೆ. ಶೇ 70ರಷ್ಟು ರೋಗಿಗಳಿಗೆ ರಕ್ತದ ಆಕರ ಕೋಶ ಹೊಂದಾಣಿಕೆಯಾಗುವ ದಾನಿಗಳನ್ನು ಹುಡುಕಬೇಕಾಗುತ್ತದೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಅತ್ಯಗತ್ಯ’ ಎಂದು ‍ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT